ಉಡುಪಿ: ಪರ್ಯಾಯ ಮಹೋತ್ಸವದ ವೇಳೆ ನಗರಸಭೆಯ ವತಿಯಿಂದ ನಡೆದ ರಸ್ತೆ ಕಾಮಗಾರಿಗಳು ಕಳಪೆ ಮತ್ತು ಅಪೂರ್ಣ ಕಾಮಗಾರಿಗಳೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನಗರದ ವಿಧ್ಯೋದಯ ಕಾಲೇಜು ಮತ್ತು ಶ್ರೀ ಕೃಷ್ಣ ಮಠದ ಸಂಪರ್ಕ ರಸ್ತೆಯಲ್ಲಿ ಹಾಗೂ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ರಸ್ತೆ ಯಲ್ಲಿ ಅರ್ಧ ರಸ್ತೆಗೆ ಡಾಮರೀಕರಣ ಮಾಡಿ ಬಿಡಲಾಗಿದೆ. ಪಾದಚಾರಿಗಳು ಎಡವಿ ಬೀಳುವಂತೆ ಚಡಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕೆಲವು ಕಡೆ ರಸ್ತೆ ಅಂಚಿನಲ್ಲಿ ಒಂದು ಫೀಟ್ ಆಳದ ಚಡಿ ನಿರ್ಮಾಣವಾಗಿದ್ದು ದ್ವಿ ಚಕ್ರ ವಾಹನ ಚಾಲಕರು ಎಚ್ಚರ ತಪ್ಪಿದರೆ ಅಪಾಯ ಸಂಭವಿಸುತ್ತದೆ. ಚಡಿ ನಿರ್ಮಾಣವಾಗಿರುವಲ್ಲಿ ರಸ್ತೆ ಬದಿ ಮಣ್ಣು ಹಾಕಿ ಸಮತಟ್ಟು ಮಾಡುವ ಕೆಲಸವನ್ನೂಮಾಡಿಲ್ಲ .
ಒಟ್ಟಾರೆ ಪರ್ಯಾಯೋತ್ಸವದ ಕಾಮಗಾರಿ ಲೆಕ್ಕ ಭರ್ತಿ ಕಾಮಗಾರಿ ಆಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.