
ಕಾರ್ಕಳ: ದಿನಾಂಕ :25/03/2025 (ಹಾಯ್ ಉಡುಪಿ ನ್ಯೂಸ್) ಕಸಬಾ ಗ್ರಾಮದ ಸಾರ್ವಜನಿಕ ಆಸ್ಪತ್ರೆ ಎದುರುಗಡೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ಹತ್ತು ಜನರನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ಶಿವಕುಮಾರ್ ಎಸ್.ಆರ್ ಅವರು ಬಂಧಿಸಿದ್ದಾರೆ.
- ಕಾರ್ಕಳ ನಗರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಶಿವಕುಮಾರ್ ಎಸ್.ಆರ್ ಅವರು ದಿನಾಂಕ:23-03-2025 ರಂದು ಕಸಬಾ ಗ್ರಾಮದ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳನ್ನು ಉಪಯೋಗಿಸಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದ ಸಮಯ ದಾಳಿ ನಡೆಸಿದ್ದಾರೆ .
- ದಾಳಿ ನಡೆಸಿದ ವೇಳೆ ಆರೋಪಿತರಾದ 1.ಚಂದ್ರ ಶೇಖರ, 2.ಹನುಮಂತ 3. ಮಾರುತಿ, 4.ಮಂಜುನಾಥ, 5. ಸೋಮಣ್ಣ, 6.ವೆಂಕಪ್ಪ, 7.ಪ್ರವೀಣ, 8.ಹನುಮೇಶ, 9.ಪರ್ವತ, 10. ನೀರ್ಪಾದಿ ಎಂಬವರು ಇಸ್ಪೀಟ್ ಜುಗಾರಿ ಆಡುತ್ತಿದ್ದು ಅವರನ್ನು ಬಂಧಿಸಿ ಆಟಕ್ಕೆ ಬಳಸಿದ ನಗದು ಹಣ 4,135/-,ಇಸ್ಪೀಟ್ ಎಲೆ ಹಾಗೂ ನೆಲದ ಮೇಲೆ ಹಾಸಿದ ಹಳೆಯ ದಿನ ಪತ್ರಿಕೆ ಸ್ವಾಧೀನಪಡಿಸಿಕೊಂಡಿದ್ದಾರೆ.
- ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ:87 KP ACT ರಂತೆ ಪ್ರಕರಣ ದಾಖಲಾಗಿದೆ.