
ಹೆಬ್ರಿ :ದಿನಾಂಕ : 17/03/2025 (ಹಾಯ್ ಉಡುಪಿ ನ್ಯೂಸ್) ಬೆಳಂಜೆ ಗ್ರಾಮದ ಈಶ್ವರ ನಗರದಲ್ಲಿ ತಡ ರಾತ್ರಿ ಡಿಜೆ ಹಾಕಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿದ್ದಾರೆ ಎಂದು ವ್ಯಕ್ತಿಯೋರ್ವರ ಮೇಲೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳಂಜೆ ಗ್ರಾಮದ ಈಶ್ವರ ನಗರದ ಕೃಷ್ಣ ಮೂರ್ತಿ ಎಂಬವರ ಮನೆಯಲ್ಲಿ ದಿನಾಂಕ :15-03-2025 ರಂದು ರಾತ್ರಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಯಾವುದೇ ಪರವಾನಗಿ ಇಲ್ಲದೆ ಬೆಳಂಜೆ ಗ್ರಾಮದ ಈಶ್ವರ ಎಂಬವರ ಸಾಯಿ ಸೌಂಡ್ಸ್ ರವರು ತಡ ರಾತ್ರಿ ವರೆಗೆ ಕರ್ಕಶವಾದ ಡಿಜೆ ಹಾಕಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿರುತ್ತಾರೆ ಎಂದು ಸಾರ್ವಜನಿಕ ದೂರಿನ ಮೇರೆಗೆ ಪೊಲೀಸರು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 109 KP ACT ರಂತೆ ಪ್ರಕರಣ ದಾಖಲಾಗಿದೆ.