Spread the love

ಉಡುಪಿ: ದಿನಾಂಕ:15-03-2025 (ಹಾಯ್ ಉಡುಪಿ ನ್ಯೂಸ್)   ಸಂತೆಕಟ್ಟೆಯ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಒಂದರ ನೌಕರರು ಸಾಲಗಾರ ಮಹಿಳೆಯೋರ್ವರ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ ಎಂದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ , ಕಲ್ಯಾಣಪುರ ನಿವಾಸಿ ನಿಕಿತ (35) ಎಂಬವರು ಉಡುಪಿ ತಾಲ್ಲೂಕು ಸಂತೆಕಟ್ಟೆ ಗ್ರಾಮದಲ್ಲಿರುವ  ಮೇರಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯಲ್ಲಿ ಸಾಲವನ್ನು ಪಡೆದುಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಾಲದ ಕಂತನ್ನು ಸ್ವಲ್ಪ ಸ್ವಲ್ಪ ಕಟ್ಟುತ್ತಿದ್ದು, ಆದರೂ ಸೊಸೈಟಿಯ ಇಬ್ಬರು ಸಿಬ್ಬಂದಿಗಳು ಪದೇ-ಪದೇ ನಿಕಿತರವರಿಗೆ ಹಾಗೂ ಅವರ ಗಂಡ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಸಾಲದ ಹಣವನ್ನು ಕಟ್ಟುವಂತೆ ಕಿರುಕುಳ ನೀಡುತ್ತಿದ್ದು, ಇದೇ ಕಾರಣದಿಂದ ನಿಕಿತರವರ ಗಂಡನನ್ನು ಕೆಲಸದಿಂದ ತೆಗೆದುಹಾಕಿದ್ದು, ದಿನಾಂಕ:13/03/2025 ರಂದು ಸಂಜೆ  ದ್ವಿಚಕ್ರ ವಾಹನದಲ್ಲಿ ಬಂದ ಸೊಸೈಟಿಯ ಇಬ್ಬರು ಸಿಬ್ಬಂದಿಗಳು  ನಿಕಿತ ರವರ ಮನೆಯನ್ನು ಅಕ್ರಮವಾಗಿ ಪ್ರವೇಶ ಮಾಡಿ, ನಿಕಿತರವರಿಗೆ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ನಾಳೆ ಸೊಸೈಟಿಗೆ 10,000/- ರೂಪಾಯಿ ಹಣವನ್ನು ಕಟ್ಟಬೇಕು, ಇಲ್ಲವಾದಲ್ಲಿ ಹೇಗೆ ವಸೂಲಿ ಮಾಡಬೇಕು ಗೊತ್ತಿದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಮರುದಿನ ದಿನಾಂಕ: 14/03/2025 ರಂದು ನಿಕಿತರವರು ಸೊಸೈಟಿಗೆ 3000/-ರೂಪಾಯಿಗಳನ್ನು ತೆಗೆದುಕೊಂಡು ಹೋಗಿ ಕಟ್ಟಿದ್ದು, ಸೊಸೈಟಿಯವರು ಹಣ ಕಟ್ಟಿರುವುದಕ್ಕೆ  ಯಾವುದೇ ರಶೀದಿಯನ್ನು ನೀಡದೇ ನಿಕಿತರವರನ್ನು ಸಂಜೆ 5:30 ಗಂಟೆಯಿಂದ 7 ಗಂಟೆಯವರೆಗೆ ಅಲ್ಲಿಯೇ ಕೂರಿಸಿ ಸೊಸೈಟಿಯ ಮ್ಯಾನೇಜರ್‌ ಹಾಗೂ ಅಲ್ಲಿಯ ಸಿಬ್ಬಂದಿಗಳಾದ 2 ಮಹಿಳೆಯರು ಮತ್ತು 2 ಪುರುಷರು ಅವಾಚ್ಯ ಶಬ್ದಗಳಿಂದ ಕೆಟ್ಟದಾಗಿ ಬೈದಿದ್ದು, ಮ್ಯಾನೇಜರ್‌  ನಿಕಿತರವರಿಗೆ ಜಾತಿ ನಿಂದನೆ ಮಾಡಿ  ನೀನು 10,000/- ರೂಪಾಯಿ ಹಣವನ್ನು ಕಟ್ಟಲೇ ಬೇಕು ಎಂದು ಹೇಳಿ ಬೆದರಿಕೆ ಹಾಕಿರುತ್ತಾರೆ ಎಂದು ನಿಕಿತರವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: SC AND THE ST (PREVENTION OF ATTROCITIES) ACT, 1989 (U/s-3(1)(r),3(1)(s)),  ಕಲಂ: 126,329(4),352,351(2),3(5)) BNS ನಂತೆ ಪ್ರಕರಣ ದಾಖಲಾಗಿದೆ.

error: No Copying!