Spread the love

ಬ್ರಹ್ಮಾವರ: ದಿನಾಂಕ :15-03-2025(ಹಾಯ್ ಉಡುಪಿ ನ್ಯೂಸ್) ಹೆಮ್ಮಾಡಿ ಗ್ರಾಮದ ನಿವಾಸಿ ಯೋರ್ವರಿಗೆ ಇಬ್ಬರು ವ್ಯಕ್ತಿಗಳು ಉದ್ಯೋಗ ನೇಮಕಾತಿ ಯ ಫ್ರಾಂಚೈಸಿ ನೀಡುವುದಾಗಿ ನಂಬಿಸಿ 40 ಲಕ್ಷ ವಂಚನೆ ನಡೆಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದಾರೆ.

ಕುಂದಾಪುರ ಹೆಮ್ಮಾಡಿ ಗ್ರಾಮದ ನಿವಾಸಿ ಚಂದ್ರ (53) ಎಂಬವರು ಮತ್ತು ಮಂಜುನಾಥ ಎಂಬುವವರು ಆತ್ಮೀಯ ಸ್ನೇಹಿತರಾಗಿದ್ದು. ಮಂಜುನಾಥ ರವರ ಮೂಲಕ  ಚಂದ್ರರವರಿಗೆ 1)ನೇ ಆರೋಪಿ ರಾಘವೇಂದ್ರ ಕಟ್ಟಿ ಎಂಬವರ ಪರಿಚಯವಾಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಚಂದ್ರ ಅವರು ತಿಳಿಸಿದ್ದಾರೆ.

ನಂತರ ಚಂದ್ರರವರಿಗೆ 1)ನೇ ಆರೋಪಿ ರಾಘವೇಂದ್ರ ಕಟ್ಟಿ ಎಂಬವನು ತಾನು SGSS HR ಕನ್ಸಲ್ಟೆನ್ಸಿ ಎಂಬ ರಾಜ್ಯ ಮತ್ತು ಕೇಂದ್ರ ಸರಕಾರದ ಉದ್ಯೋಗಕ್ಕೆ ಬೇಕಾಗುವ ತರಬೇತಿ ಹಾಗೂ ನೇಮಕಾತಿಯನ್ನು ನೀಡುವ ಸಂಸ್ಥೆಯನ್ನು ಸ್ಥಾಪಿಸಿರುತ್ತೇನೆ . ಈ ಸಂಸ್ಥೆಯು ಜಿಲ್ಲಾವಾರು ಪ್ರಾಂಚೈಸಿಯನ್ನು ನೀಡುತ್ತಿದೆ ಎಂದು ಚಂದ್ರರವರಿಗೆ ತಿಳಿಸಿರುತ್ತಾರೆ ಎಂದಿದ್ದಾರೆ. ನಂತರ ಆರೋಪಿ 1 ರಾಘವೇಂದ್ರ ಕಟ್ಟಿ ಮತ್ತು 2ನೇ ಯ ಆರೋಪಿ ಶಿವಾನಂದ ಎಂಬವನು ಫೋನ್ ಕರೆ ಮೂಲಕ ಚಂದ್ರರವರನ್ನು ಸಂಪರ್ಕಿಸಿ ಉಡುಪಿ ಜಿಲ್ಲೆಯ ಪ್ರಾಂಚೈಸಿಯನ್ನು ಬ್ರಹ್ಮಾವರದಲ್ಲಿ ಸ್ಥಾಪಿಸಲು ಇಚ್ಚಿಸಿದ್ದು ಈ ಪ್ರಾಂಚೈಸಿಯನ್ನು ಚಂದ್ರರವರಿಗೆ ನೀಡುವುದಾಗಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ದಿನಾಂಕ 10/05/2021 ರಂದು ಚಂದ್ರ ರವರಿಗೆ ಬ್ರಹ್ಮಾವರದಲ್ಲಿ ಸಮಕ್ಷಮ ಭೇಟಿ ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಪ್ರಾಂಚೈಸಿಯ ಕಾರ್ಯಾಲಯವನ್ನು ಬ್ರಹ್ಮಾವರ ತಾಲೂಕು ವಾರಂಬಳ್ಳಿ ಗ್ರಾಮದ BAZALEEL COMPLEX ನಲ್ಲಿ ಸ್ಥಾಪಿಸುವಂತೆ ತಿಳಿಸಿದ್ದು ಅದರಂತೆ ಚಂದ್ರರವರು ಪ್ರಾಂಚೈಸಿ ಕಾರ್ಯಾಲಯದ ಸ್ಥಾಪನೆಯ ಕೆಲಸಕ್ಕೆ ದಿನಾಂಕ 07/02/2022 ರಂದು ರೂಪಾಯಿ 7,97,000/- ಹಣವನ್ನು ಖರ್ಚು ಮಾಡಿರುತ್ತಾರೆ. ಅಲ್ಲದೇ 2021 ಇಸವಿಯ ಅಗಸ್ಟ್ ತಿಂಗಳಿನಿಂದ 2022 ರ ಮಾರ್ಚ್ ತಿಂಗಳ ವರೆಗೆ ಆರೋಪಿಗಳು ಈರ್ವರು ಹೇಳಿದ ಮಾನದಂಡಗಳಿಗೆ ರೂಪಾಯಿ 5.20,000/- ಹಣವನ್ನು ಖರ್ಚು ಮಾಡಿರುತ್ತಾರೆ.ಮತ್ತುಇನ್ನಿತರ ಶುಲ್ಕ ಎಂದು ರೂಪಾಯಿ 26,86,800/- ಹಣವನ್ನು ಚಂದ್ರ ರವರು ಮತ್ತು ಚಂದ್ರರವರ ಪಾಲುದಾರರ ಖಾತೆಯಿಂದ ಆರೋಪಿ 1ನೇ ರಾಘವೇಂದ್ರ ಕಟ್ಟಿ ಮಾಲಿಕತ್ವದ SGSS HR ಕನ್ಸಲ್ಟೆನ್ಸಿ ಖಾತೆ ನಂಬ್ರ 920020070482600 ನೇದಕ್ಕೆ ವರ್ಗಾವಣೆ ಮಾಡಿರುತ್ತಾರೆ ಎನ್ನಲಾಗಿದೆ.

ನಂತರ ಚಂದ್ರರವರಿಗೆ ಆರೋಪಿಗಳು ಪ್ರಾಂಚೈಸಿ ಮುಖಾಂತರ 27 ಜನ ಉದ್ಯೋಗಾಕಾಂಕ್ಷಿಗಳನ್ನುಆಯ್ಕೆ ಮಾಡಿದ್ದು ಪ್ರತಿ ಅಭ್ಯರ್ಥಿಗಳಿಂದ ತಲಾ 4,50,000/- ಹಣವನ್ನು ಸಂಗ್ರಹಿಸಿ ಕೊಡುವಂತೆ ತಿಳಿಸಿರುತ್ತಾರೆ ಎನ್ನಲಾಗಿದೆ.ಸಂಶಯಗೊಂಡ ಚಂದ್ರರವರು ಆರೋಪಿ 1 ನೇ ರಾಘವೇಂದ್ರ ಕಟ್ಟಿ ರವರಿಗೆ ಲಿಖಿತ ದಾಖಲೆಗಳನ್ನುನೀಡುವಂತೆ ತಿಳಿಸಿದ್ದು .ಆರೋಪಿ 1 ನೇ ರಾಘವೇಂದ್ರ ಕಟ್ಟಿ ರವರು ದಾಖಲಾತಿಗಳನ್ನು ನೀಡಲು ನಿರಾಕರಿಸಿ ಚಂದ್ರ ರವರು ನೀಡಿದ ಹಣವನ್ನು ಹಿಂದಿರುಗಿಸುವುದಾಗಿ ಆರೋಪಿಗಳು ತಿಳಿಸಿರುತ್ತಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಆರೋಪಿಗಳು ಈರ್ವರು  ಇಲ್ಲಿಯವರೆಗೂ ಬೇರೆ ಬೇರೆ ಕಾರಣಗಳನ್ನು ನೀಡುತ್ತಾ. ಚಂದ್ರರವರಿಗೆ  ಯಾವುದೇ ಹಣವನ್ನು ನೀಡದೇ,ಕರೆಯನ್ನು ಸ್ವೀಕರಿಸದೇ, ಭೇಟಿಗೂ ಸಿಗದೇ, ಮೋಸ ಮಾಡುವ  ಉದ್ದೇಶದಿಂದ ಹಂತ ಹಂತವಾಗಿ ಒಟ್ಟು ರೂಪಾಯಿ 40,03,800 ಹಣವನ್ನು ಪಡೆದು ವಂಚನೆ ಮಾಡಿರುತ್ತಾರೆ ಎಂದು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ.

ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 120(b)̤417.418.420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!