Spread the love

ಕುಂದಾಪುರ: ದಿನಾಂಕ:14-03-2025 (ಹಾಯ್ ಉಡುಪಿ ನ್ಯೂಸ್ )

ಸ್ಕೌಟ್ ಹಾಗೂ ಗೈಡ್ಸ್ ಸಂಸ್ಥೆಯಲ್ಲಿ ತಿಳಿಯಲು ಬಹಳಷ್ಟಿದೆ. ವ್ಯಕ್ತಿತ್ವ ವಿಕಸನಕ್ಕೆ ಇದೊಂದು ರಹದಾರಿ. ಆದುದರಿಂದ ಸ್ಕೌಟ್ ಮತ್ತು ಗೈಡ್ಸ್ ಚಳುವಳಿಯಲ್ಲಿ ಆದಷ್ಟು ತಮ್ಮನ್ನು ತೊಡಗಿಸಿಕೊಳ್ಳಿ ಎಂದು ಭಾರತ್ ಸ್ಕೌಟ್ ಹಾಗು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಹಾಗು ಮಾಜಿ ಸಚಿವರಾದ ಪಿ ಜಿ ಆರ್ ಸಿಂಧ್ಯಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಭಾರತ್ ಸ್ಕೌಟ್ ಹಾಗು ಗೈಡ್ಸ್ ಕರ್ನಾಟಕ ಉಡುಪಿ ಜಿಲ್ಲಾ ಸಂಸ್ಥೆ ಶ್ರೀ ಮುಕಾಂಬಿಕಾ ದೇವಸ್ಥಾನದ ಮೂಕಾಂಬಿಕಾ ಸಭಾ ಗೃಹದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಚಾರಣ, ಪ್ರಕೃತಿ ಅಧ್ಯಯನ ಹಾಗೂ ಸ್ವಚ್ಛತಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸರಕಾರಿ ಉದ್ಯೋಗವನ್ನು ನಂಬಿ ಕೂತರೆ ಆಗುವುದಿಲ್ಲವಾದುದರಿಂದ ಸ್ವಂತ ಉದ್ದಿಮೆ ಹಾಗು ವಿವಿಧ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳಿ ಎಂದು ಕರೆ ಇತ್ತರು.

ಜಿಲ್ಲಾ ಮುಖ್ಯ ಆಯುಕ್ತರಾದ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ಇಂತಹ ಕ್ಯಾಂಪ್ ಗಳಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ 25 ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಹಲವಾರು ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.

ವೇದಿಕೆಯಲ್ಲಿ ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು, ಜಿಲ್ಲಾ ಖಜಾಂಜಿ ಹರಿಪ್ರಸಾದ್ ರೈ, ಬೈಂದೂರು ಸ್ಥಳೀಯ ಅಧ್ಯಕ್ಷ ನರಸಿಂಹ ದೇವಾಡಿಗ, ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ ಭಟ್, ಗೋಳಿಹೊಳೆ ಮೂಕಾಂಬಿಕಾ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಸಂಪತ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ದೀಪಿಕಾ ಶೆಟ್ಟಿ, ಶಿಬಿರ ನಾಯಕರಾಗಿರುವ ರೋವರ್ ಲೀಡರ್ ಹರೀಶ್ ,ಅಂತರಾಷ್ಟ್ರೀಯ ಸ್ಕೌಟ್ ಆಯುಕ್ತರಾದ ಮಧುಸೂದನ್ ಉಪಸ್ಥಿತರಿದ್ದರು

ಜಿಲ್ಲಾ ತರಬೇತಿ ಆಯುಕ್ತ ಉದಯ ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಶ್ರೀಮತಿ ಸುಮನ್ ಶೇಖರ್ ಪ್ರಸ್ತಾಪಿಸಿದರು. ಜಿಲ್ಲಾ ಕಾರ್ಯದರ್ಶಿ ಆನಂದ್ ಅಡಿಗ ನಿರೂಪಿಸಿದರು.

error: No Copying!