
ಕುಂದಾಪುರ: ದಿನಾಂಕ 14-03-2025(ಹಾಯ್ ಉಡುಪಿ ನ್ಯೂಸ್) ಗೋಪಾಡಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಂಜಾನಾಯ್ಕ ಎನ್ ಅವರು ಬಂಧಿಸಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆ , ಪೊಲೀಸ್ ಉಪ ನಿರೀಕ್ಷಕರಾದ ನಂಜಾನಾಯ್ಕ ಎನ್ ಅವರು ದಿನಾಂಕ :13-03-2025 ರಂದು ಠಾಣೆಯಲ್ಲಿರುವಾಗ ಗೋಪಾಡಿ ಗ್ರಾಮದ ರಿಕ್ಷಾ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬಂದ ಗುಪ್ತ ಮಾಹಿತಿ ಮೇರೆಗೆ ಕೂಡಲೇ ದಾಳಿ ನಡೆಸಿ ಅಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಚಂದ್ರಶೇಖರ ಎಂಬವನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಮಟ್ಕಾ ಜುಗಾರಿ ಸಂಗ್ರಹಿಸಲು ಪ್ರತಾಪ ಎಂಬಾತ ತಿಳಿಸಿದ್ದು ಸಂಗ್ರಹಿದ ಮೊತ್ತವನ್ನು ಪ್ರತಾಪ ಪಡೆದುಕೊಂಡು ತನಗೆ ಕಮೀಶನ್ ನೀಡುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ರೂಪಾಯಿ 780 /- ಹಾಗೂ ಮಟ್ಕಾ ಸಂಖ್ಯೆ ಬರೆದ ಚೀಟಿ, ಮಟ್ಕಾ ಬರೆಯಲು ಉಪಯೋಗಿಸಿದ ಬಾಲ್‌ಪೆನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ:112 BNS & 78(I) (III) KP ACT ರಂತೆ ಪ್ರಕರಣ ದಾಖಲಾಗಿದೆ.