
ಬ್ರಹ್ಮಾವರ: ದಿನಾಂಕ: 10-03-2025(ಹಾಯ್ ಉಡುಪಿ ನ್ಯೂಸ್) ವಾಟ್ಸಪ್ ಗ್ರೂಫ್ ಗೆ ಬಂದಿದ್ದ ಲಿಂಕನ್ನು ಒತ್ತಿದಾಗ ಬ್ಯಾಂಕ್ ಖಾತೆಯಲ್ಲಿದ್ದ ಎರಡು ಲಕ್ಷ ರೂಪಾಯಿ ವಂಚನೆಯಿಂದ ಬೇರೆ ಯವರ ಖಾತೆಗೆ ವರ್ಗಾವಣೆ ಆಗಿದೆ ಎಂದು ಭುಜಂಗ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ರಹ್ಮಾವರ ನಿವಾಸಿ ಭುಜಂಗ (70) ಎಂಬವರಿಗೆ Whatsapp ನಂಬ್ರದಲ್ಲಿರುವ ಗ್ರೂಪಿನಲ್ಲಿ ದಿನಾಂಕ 09/03/2025 ರಂದು ಬಂದಿರುವ Link ಅನ್ನು ಭುಜಂಗರವರು ತಿಳಿಯದೇ Click ಮಾಡಿದ್ದು, ನಂತರ ಭುಜಂಗ ರವರ HDFC Bank ನ S.B ಖಾತೆಯಿಂದ ಅದೇ ದಿನ ಬೆಳಿಗ್ಗೆ 10:00 ಗಂಟೆಯಿಂದ 11:00 ಗಂಟೆಯ ಮಾಧ್ಯಾವದಿಯಲ್ಲಿ ಒಟ್ಟು ರೂಪಾಯಿ 2,00,000/- ಹಣವನ್ನು ಮೋಸದಿಂದ ಅಪರಿಚಿತ ಖಾತೆಗೆ ವರ್ಗಾಯಿಸಿ ಕೊಂಡು ವಂಚನೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 66 (C), 66 (D) IT ACT ರಂತೆ ಪ್ರಕರಣ ದಾಖಲಾಗಿದೆ.