Spread the love

ಅಜೆಕಾರು: ದಿನಾಂಕ :09-03-2025(ಹಾಯ್ ಉಡುಪಿ ನ್ಯೂಸ್) ಕುಕ್ಕುಜೆ ಗ್ರಾಮದ ಬೈಂತ್ಲ ಎಂಬಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಇರಿಸಿರುವಲ್ಲಿಗೆ ಅಜೆಕಾರು ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಪ್ರವೀಣ್ ಕುಮಾರ್ ಅವರು ದಾಳಿ ನಡೆಸಿ ಮರಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಅಜೆಕಾರು ಪೊಲೀಸ್ ಠಾಣೆ ಪಿಎಸ್ಐ ಯವರಾದ ಪ್ರವೀಣ್ ಕುಮಾರ್ ಅವರು ದಿನಾಂಕ 09/03/2025 ರಂದು ಇಲಾಖೆಯ ಜೀಪಿನಲ್ಲಿ, ಚಾಲಕ ಶೇಖರ್‌ ಹಾಗೂ ನಾಗೇಶ, ಪ್ರವೀಣ ಕುಮಾರ್‌ ರೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿ ಸಂಚರಿಸುತ್ತಿದ್ದ ಸಮಯ ಸಾರ್ವಜನಿಕ ರಿಂದ ಬಂದ ಖಚಿತ ಮಾಹಿತಿ ಮೇರೆಗೆ  ಕುಕ್ಕುಜೆ ಗ್ರಾಮದ ಬೈಂತ್ಲ ಎಂಬಲ್ಲಿರುವ ನಿತ್ಯಾನಂದ ಎಂಬವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದ ಬಳಿ ನೋಡುವಾಗ ಸುಮಾರು 5 ಯುನಿಟ್‌ನಷ್ಟು ಮರಳನ್ನು ದಾಸ್ತಾನು ಮಾಡಿರುವುದು ಕಂಡುಬಂದಿರುತ್ತದೆ ಎನ್ನಲಾಗಿದೆ.

ಈ ಬಗ್ಗೆ ನಿತ್ಯಾನಂದ ಅವರಲ್ಲಿ ವಿಚಾರಿಸಿದಾಗ ಈ ಮರಳನ್ನು ತಾನು ದಾಸ್ತಾನು ಮಾಡಿದ್ದು, ಇದಕ್ಕೆ ಯಾವುದೇ ಪರವಾನಿಗೆ ಇರುವುದಿಲ್ಲ ಎಂಬುದಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ .ಹಾಗೂ ತನಗೆ ಮರಳನ್ನು ಪದ್ಮನಾಭ ಮತ್ತು ಅಮಿತ್‌ ಎಂಬವರು ಯಾವುದೇ ಪರವಾನಿಗೆ ಇಲ್ಲದೆ ಕಳವು ಮಾಡಿ ಅಕ್ರಮವಾಗಿ ಟಿಪ್ಪರ್‌ ಲಾರಿಯಲ್ಲಿ ಸರಬರಾಜು ಮಾಡಿದ್ದಾಗಿ ತಿಳಿಸಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಮರಳನ್ನು ಸ್ವಾಧೀನಪಡಿಸಿಕೊಂಡಿದ್ದು, ಇದರ ಮೌಲ್ಯ ಸುಮಾರು 10,000/- ರೂ. ಆಗಬಹುದಾಗಿದೆ ಎನ್ನಲಾಗಿದೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ  ಕಲಂ: 303(2),112 BNS, 4,4(A) 21 MMDR Act ರಂತೆ ಪ್ರಕರಣ ದಾಖಲಾಗಿದೆ.

error: No Copying!