Spread the love

ಮಣಿಪಾಲ: ದಿನಾಂಕ: 04/03/2025 (ಹಾಯ್ ಉಡುಪಿ ನ್ಯೂಸ್) ಕ್ರಿಕೆಟ್ ಮೈದಾನದಲ್ಲಿ ಆಟಗಾರನೋರ್ವ ಸ್ಟಂಪ್ ನಿಂದ ಗಂಭೀರ ಹಲ್ಲೆ ನಡೆಸಿದ್ದಾನೆ ಎಂದು ಸುಧಾಮ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಲೆವೂರು ಗ್ರಾಮದ ನಿವಾಸಿ ಸುಧಾಮ (47) ಎಂಬವರು ದಿನಾಂಕ: 02-03-2025 ರಂದು ತನ್ನ ಸ್ನೇಹಿತರಾದ ಶಂಕರ, ಯೋಗೀಶ್‌, ಸಂದೀಪ್‌ ಹಾಗೂ ಅಭಿಲಾಶ ಎಂಬವರೊಂದಿಗೆ ಉಡುಪಿ ತಾಲೂಕು ಅಲೆವೂರು ಗ್ರಾಮದ ರಾಂಪುರ ಎಂಬಲ್ಲಿ ಇರುವ ಆಟದ ಮೈದಾನಕ್ಕೆ ಹೋಗಿದ್ದು  ಅಲ್ಲಿ ಸುಧಾಮರವರು ಶಂಕರ ಎಂಬವರೊಂದಿಗೆ ಮಾತನಾಡಿಕೊಂಡಿರುವಾಗ ಆರೋಪಿ ಯೋಗೀಶ್‌ ಎಂಬವನು ಏಕಾಏಕಿ ಸುಧಾಮರವರ ಬಳಿ ಬಂದು ಅವರನ್ನು ಉದ್ದೇಶಿಸಿ ಜಾತಿ ನಿಂದನೆ ಮಾಡಿ ಜೀವಬೆದರಿಕೆ ಹಾಕಿ ಕ್ರಿಕೆಟ್ ಸ್ಟಂಪ್‌ ನಿಂದ ಸುಧಾಮರವರ ತಲೆಗೆ ಹಲ್ಲೆ ಮಾಡಿ ರಕ್ತ ಬರುವಂತೆ ಗಾಯ  ಮಾಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆ ಸಮಯ ಶಂಕರ ರವರು ತಡೆಯಲು ಬಂದಾಗ ಆರೋಪಿ ಯೋಗೀಶ್ ನು ಶಂಕರ ರವರ ತಲೆಗೂ ಕೂಡಾ ಕ್ರಿಕೆಟ್‌ ಸ್ಟಂಪ್‌ ನಿಂದ ಹೊಡೆದು ಗಾಯಗೊಳಿಸಿದ್ದಾನೆ ಎನ್ನಲಾಗಿದೆ .ಬಳಿಕ ಸಂದೀಪ ನರೋಹ್ನ ಎಂಬವರು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ ಎಂದು ಸುಧಾಮರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ  ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 118, 351(2) BNS & ಕಲಂ: 3(1)(r)(s), 3(2)(v-a) SC ST ACT ರಂತೆ ಪ್ರಕರಣ ದಾಖಲಾಗಿದೆ.

error: No Copying!