Spread the love

ಮಂಗಳೂರು: ದಿನಾಂಕ:03-03-2025(ಹಾಯ್ ಉಡುಪಿ ನ್ಯೂಸ್)

ಮಂಗಳೂರಿನ ರಾವ್ ಮತ್ತು ರಾವ್ ಸರ್ಕಲ್ ಹತ್ತಿರದ ಲಾಡ್ಜ್‌ ಒಂದರಲ್ಲಿ ನೇಣಿಗೆ ಶರಣಾಗಿರುವ ವ್ಯಕ್ತಿಯನ್ನು ಉತ್ತರ ಪ್ರದೇಶದ ಘಾಜಿಪುರದ ಅಭಿಷೇಕ್ ಸಿಂಗ್(40) ಎಂದು ಗುರುತಿಸಲಾಗಿದೆ.

ಮೋನಿಕಾ ಸಿಹಾಗ್ - ಅಭಿಷೇಕ್ ಸಿಂಗ್

ಮೋನಿಕಾ ಸಿಹಾಗ್ – ಅಭಿಷೇಕ್ ಸಿಂಗ್

ಸಿಐಎಸ್‌ಎಫ್ ಮಹಿಳಾ ಅಧಿಕಾರಿಯೊಬ್ಬರು ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ಸೋಮವಾರ ನಡೆದಿದೆ.

ಮಂಗಳೂರಿನ ರಾವ್ ಮತ್ತು ರಾವ್ ಸರ್ಕಲ್ ಹತ್ತಿರದ ಲಾಡ್ಜ್‌ ಒಂದರಲ್ಲಿ ನೇಣಿಗೆ ಶರಣಾಗಿರುವ ವ್ಯಕ್ತಿಯನ್ನು ಉತ್ತರ ಪ್ರದೇಶದ ಘಾಜಿಪುರದ ಅಭಿಷೇಕ್ ಸಿಂಗ್(40) ಎಂದು ಗುರುತಿಸಲಾಗಿದೆ.

ಅಭಿಷೇಕ್ ಸಿಂಗ್ ಆತ್ಮಹತ್ಯೆಗೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಸಿಐಎಸ್ಎಫ್ ಸಹಾಯಕ ಕಮಾಂಡೆಂಟ್ ಮೋನಿಕಾ ಸಿಹಾಗ್ ಅವರು ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮೋನಿಕಾ ಸಿಹಾಗ್ ಈಗಾಗಲೇ ವಿವಾಹಿತೆಯಾಗಿದ್ದು, ಆ ವಿಷಯವನ್ನು ಮುಚ್ಚಿಟ್ಟು ತನ್ನೊಂದಿಗೆ ಸಂಬಂಧ ಬೆಳೆಸಿದ್ದರು ಎಂದು ಅಭಿಷೇಕ್ ಸಿಂಗ್ ವಿಡಿಯೋದಲ್ಲಿ ತಿಳಿಸಿದ್ದಾರೆ.

ಚೆನ್ನೈನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್, ಕೆಲವು ದಿನಗಳ ಹಿಂದೆ ಸಹೋದ್ಯೋಗಿಗಳೊಂದಿಗೆ ಮಂಗಳೂರಿಗೆ ವಸ್ತುಪ್ರದರ್ಶನವೊಂದರಲ್ಲಿ ಭಾಗವಹಿಸಲು ಬಂದಿದ್ದರು. ಅವರು ನಗರದ ರಾವ್ & ರಾವ್ ವೃತ್ತದ ಬಳಿ ಇರುವ ಲಾಡ್ಜ್‌ವೊಂದರಲ್ಲಿ ತಂಗಿದ್ದರು.

ಘಟನೆ ಸಂಬಂಧ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ

error: No Copying!