
ಉಡುಪಿ: ದಿನಾಂಕ:02-03-2025(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ವರದಕ್ಷಿಣೆ ಯಾಗಿ ನೀಡಿದ ಚಿನ್ನ ಕಡಿಮೆಯಾಯಿತೆಂದು ಚುಚ್ಚಿ ನಿಂದಿಸುತ್ತಾ ತಲಾಕ್ ನೀಡುವುದಾಗಿ ಬೆದರಿಕೆ ಹಾಕಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳೂರು,ಉಳಿಪಾಡಿ ನಿವಾಸಿ ಶಿಫಾ ಗೌಸ್ ಶೇಖ್ (31) ಅವರ ವಿವಾಹವು ಆರೋಪಿ ಪಾಜಿಲ್ ಅಹಮ್ಮದ್ ಎಂಬವನೊಂದಿಗೆ ದಿನಾಂಕ: 28/07/20218 ರಂದು ಮುಸ್ಲಿಂ ಸಂಪ್ರದಾಯದಂತೆ ಗುರು ಹಿರಿಯರ ಸಮ್ಮುಖದಲ್ಲಿ ಕೈಕಂಬ ಪ್ರೀಮಿಯರ್ ಹಾಲ್‌ನಲ್ಲಿ ನಡೆದಿರುತ್ತದೆ ಎಂದೂ ಮದುವೆಯ ಪೂರ್ವದಲ್ಲಿ 2ನೇ ಆರೋಪಿ ಮೊಹಮ್ಮದ್ ಜಾಫರ್ ದರ್ಜಿ ನಿಮ್ಮ ಬಳಿ ಸಾಧ್ಯವಾದಷ್ಟು ಮಾತ್ರ ಚಿನ್ನವನ್ನು ಮಗಳಿಗೆ ಹಾಕಿ ಎಂದು ತಿಳಿಸಿದಂತೆ ಶಿಫಾ ಗೌಸ್ ಶೇಖ್ ರವರ ತಂದೆ ಶಿಫಾ ಗೌಸ್ ಶೇಖ್ ರಿಗೆ 35 ಪವನ್ ಚಿನ್ನಾಭರಣವನ್ನು ಹಾಕಿ ಮದುವೆ ಮಾಡಿ ಕೊಟ್ಟಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆಯಾದ ಕೆಲವು ದಿನಗಳ ನಂತರ 1ನೇ ಆರೋಪಿ ಗಂಡ ಪಾಜಿಲ್ ಅಹಮ್ಮದ್ ನು ಶಿಫಾ ಗೌಸ್ ಶೇಖ್ ಗೆ ಹಾಕಿದ ಚಿನ್ನದ ಬಗ್ಗೆ ಪ್ರಶ್ನಿಸಲು ಪ್ರಾರಂಭಿಸಿದ್ದು, ಶಿಫಾ ಗೌಸ್ ಶೇಖ್ ರಿಗೆ ಅವರ ತಂದೆ ಮನೆಯವರು ಹಾಕಿದ ಚಿನ್ನಾಭರಣ ಕಡಿಮೆ ಆಯಿತೆಂದು ಪದೇ ಪದೇ ಚುಚ್ಚಿ ಹೇಳುತ್ತಿದ್ದರು ಎಂದು ದೂರಿದ್ದಾರೆ.2 ಮತ್ತು 3ನೇ ಆರೋಪಿ ನಸೀಮಾ ಜಾಫರ್ ಅವಹೇಳನಕಾರಿಯಾಗಿ ಮಾತನಾಡಿ ಟೀಕಿಸುತ್ತಿದ್ದರು ಹಾಗೂ ಶಿಫಾ ಗೌಸ್ ಶೇಖ್ ರಿಗೆ ತಲಾಕ್ ನೀಡಿ ಬೇರೆ ಮದುವೆಯಾಗುವುದಾಗಿ ಬೆದರಿಕೆ ಹಾಕುತ್ತಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ: 06/02/2025 ರಂದು 1ನೇ ಆರೋಪಿ ಗಂಡನು ಶಿಫಾ ಗೌಸ್ ಶೇಖ್ ರನ್ನು ಊರಿಗೆ ಕರೆದುಕೊಂಡು ಬಂದಿದ್ದು, ದಿನಾಂಕ:06/02/2025 ರಿಂದ 10/02/2025 ರ ತನಕ ಶಿಫಾ ಗೌಸ್ ಶೇಖ್ ರನ್ನು ಮನೆಬಿಟ್ಟು ಹೋಗು ಎಂದು ಒತ್ತಡ ಹೇರಿ ಹೊಡೆಯಲು ಬರುತ್ತಿದ್ದು, ಪ್ರತಿಯೊಂದು ವಿಚಾರಕ್ಕೂ ದೂಷಿಸಿ ವಿಚ್ಛೇದನ ನೀಡುವಂತೆ ಒತ್ತಾಯಿಸಿ ಶಿಫಾ ಗೌಸ್ ಶೇಖ್ ರನ್ನು ಇದೀಗ ಮನೆಯಿಂದ ಹೊರಗೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 85, 115(2), ಜೊತೆಗೆ 3(5) BNS ನಂತೆ ಪ್ರಕರಣ ದಾಖಲಾಗಿದೆ.