
ಹೆಬ್ರಿ: ದಿನಾಂಕ:23-02-2025(ಹಾಯ್ ಉಡುಪಿ ನ್ಯೂಸ್) ಗೇರುಬೀಜ ತಿರುಳು ತಯಾರಿಸಿ ಮಾರಾಟ ಮಾಡುತ್ತಿದ್ದ ಹೆಬ್ರಿ ಯ ಕ್ಯಾಶ್ಯ್ ಕಂಪೆನಿಯೊಂದಕ್ಕೆ ರಾಜಸ್ಥಾನ ಮೂಲದ ಕಂಪನಿಯೊಂದು 32 ಲಕ್ಷ ರೂಪಾಯಿ ವಂಚನೆ ನಡೆಸಿದೆ ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೆಬ್ರಿ , ಶಿವಪುರ ಗ್ರಾಮದ ನಿವಾಸಿ ಶಿವಪ್ರಸಾದ್ ಎಮ್ ಎಂಬವರು ಮೆಸರ್ಸ್ ಕೋಮಲ್ ಕ್ಯಾಶ್ಯೂಸ್ ನ ಮ್ಯಾನೆಜಿಂಗ್ ಪಾರ್ಟನರ್ ಆಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಸ್ಥೆಯು ಗೇರು ಬೀಜ ತಿರುಳು ತಯಾರಿಸಿ ಮಾರಾಟ ಮಾಡುವ ಘಟಕವಾಗಿದ್ದು ಸದ್ರಿ ಸಂಸ್ಥೆಗೆ ರಾಜಸ್ಥಾನ ಮೂಲದ GSTIN/UIN08ADWPL5442J2ZW ನೇ ಜಿ,ಎಸ್,ಟಿ ನಂಬ್ರ ಹೊಂದಿರುವ ಮನ್ನತ್ ಓವರ್ ಸೀಸ್ ಕಂಪೆನಿ ಹೆಸರಿನಲ್ಲಿ ಆಪಾದಿತರಾದ 1. ರವಿ ಲಾಲ್ವಾನಿ ರಾಜಸ್ಥಾನ 2.ಗೋಪಾಲ ಲಾಲ್ವಾನಿ ರಾಜಸ್ಥಾನ, 3.ಮೋಹನ್ ;ಲಾಲ್ವಾನಿ ರಾಜಸ್ಥಾನ, 4.ಕನ್ನಯ್ಯ ಲಾಲ್ವಾನಿ ರಾಜಸ್ಥಾನ ಎಂಬವರು ಎರಡು ಮೂರು ಬಾರಿ ಬೇಟಿ ಮಾಡಿ ಕ್ಯಾಶ್ಯೂ ಕರ್ನಲ್‌ಗಳನ್ನು ತಮಗೆ ಸರಬರಾಜು ಮಾಡಬೇಕಾಗಿ ಶಿವಪ್ರಸಾದ್ ಎಮ್ ಅವರನ್ನು ನಂಬಿಸಿ ವ್ಯವಹಾರ ಮಾಡುತ್ತಿದ್ದು ಮೊದ ಮೊದಲು ಗೇರು ಬೀಜ ಕರ್ನಲ್ ತೆಗೆದು ಕೊಂಡಿರುವುದಕ್ಕೆ ಹಣ ಪಾವತಿ ಮಾಡುತ್ತಿದ್ದು ನಂತರ ದಿನಾಂಕ 02/05/2023 ರಂದು ವಿವಿದ ಗ್ರೇಡ್‌ನ 8,41,050 -00 ಮೌಲ್ಯದ ಗೇರು ಬೀಜ ತಿರುಳನ್ನು ಮತ್ತು ದಿನಾಂಕ 15/05/2023 ರಂದು ವಿವಿದ ಗ್ರೆಡ್ ನ 12,49,500-00 ಮೌಲ್ಯದ ಗೇರು ಬೀಜ ತಿರುಳನ್ನು ಹಾಗೂ ದಿನಾಂಕ 22/06/2023 ರಂದು ವಿವಿದ ಗ್ರೆಡ್ ನ 10,82,550 -00 ಮೌಲ್ಯದ ಗೇರು ಬೀಜ ತಿರುಳನ್ನು ಹೀಗೆ ಒಟ್ಟು 31,73,100-00 ರೂ ಮೌಲ್ಯದ ಗೇರು ಬೀಜ ತಿರುಳನ್ನು ಅವರ ಬೇಡಿಕೆ ಮೇರೆಗೆ ಜಿ,ಎಸ್,ಟಿ ಬಿಲ್ ಮುಖಾಂತರ ಸರಬರಾಜು ಮಾಡಿದ್ದು ಆಪಾದಿತರು ಹಣವನ್ನು ನೀಡದೆ ಮೊಬೈಲ್ ಸ್ಚಿಚ್ ಆಪ್ ಮಾಡಿಕೊಂಡಿದ್ದು ನಂಬಿಕೆ ದ್ರೋಹ ಎಸಗಿ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 406,420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.