Spread the love

ಹೆಬ್ರಿ: ದಿನಾಂಕ : 22/02/2025(ಹಾಯ್ ಉಡುಪಿ ನ್ಯೂಸ್) ನಂದಲ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಜಾತ್ರಾ ಕಾರ್ಯಕ್ರಮದ ಹಣದ ಲೆಕ್ಕಾಚಾರದ ವಿಷಯದಲ್ಲಿ ದೇವಸ್ಥಾನದ ಆಡಳಿತ ವರ್ಗ ಹಾಗೂ ಇತರರ ನಡುವೆ ಹೊಡೆದಾಟ ನಡೆದಿದೆ ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೆಬ್ರಿ ಠಾಣಾ ವ್ಯಾಪ್ತಿಯ ನಾಡ್ಪಾಲು ಗ್ರಾಮದ ನಂದಲ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ದಿನಾಂಕ:20-02-2025 ರಂದು ವಾರ್ಷಿಕ ಜಾತ್ರೆ ಕಾರ್ಯಕ್ರಮವಿದ್ದು ದೇವಸ್ಥಾನದ ಅನುವಂಶಿಕ ಆಡಳಿತ ವರ್ಗದವರಾದ ಮನೋರಮಾ ಹಾಗೂ ಅವರ ಗಂಡ ಶೇಖರ ಹಾಗೂ ಅವರ ಮಗ ಪ್ರವೀಣ್‌ ಕುಮಾರ್‌ ಹಾಗೂ ಅನಿಲ್‌, ಸುಪ್ರೀತ್‌ ಎಂಬವರು ಹಾಗೂ ಇತರರು ಮತ್ತು ದೇವಸ್ಥಾನವನ್ನು ಹಿಂದು ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಗೆ ಕೊಡುವ ಬಗ್ಗೆ ಅರ್ಜಿ ನೀಡಿದ ಅರ್ಜೀದಾರರಾದ ವಿಜಯ್‌ , ರಾಘವೇಂದ್ರ, ಸುದರ್ಶನ್‌ ,ಉಮೇಶ , ಶ್ರೀನಿವಾಸ ಹಾಗೂ ನಾಗರಾಜ ಮತ್ತು ಇತರರು ಮರು ದಿನ ದಿನಾಂಕ 21/02/2025 ರಂದು ಬೆಳಗ್ಗೆ  ದೇವಸ್ಥಾನದ ಹಣದ ಲೆಕ್ಕಾಚಾರದ ವಿಷಯದಲ್ಲಿ ಪರಸ್ಪರ ಹೊಡೆದಾಡಿಕೊಂಡು ದೊಂಬಿ ನಿರ್ಮಾಣ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ  ಕಲಂ: 191(2) BNSS ರಂತೆ ಪ್ರಕರಣ ದಾಖಲಾಗಿದೆ.

error: No Copying!