Spread the love

ಕಾರ್ಕಳ: ದಿನಾಂಕ:19-02-2025 (ಹಾಯ್ ಉಡುಪಿ ನ್ಯೂಸ್) ನಿಟ್ಟೆ ಕಾಲೇಜಿನ ಹಿಂಭಾಗದ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಯುವಕನೋರ್ವನಿಗೆ ಕಾರೊಂದರಲ್ಲಿ ಬಂದ ಐದು ಜನರ ತಂಡವೊಂದು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ.

ಬೊಮ್ಮರಬೆಟ್ಟುಗ್ರಾಮದ ನಿವಾಸಿ ಸಾತ್ವಿಕ್ (20) ಎಂಬವರು ದಿನಾಂಕ 18/02/2025 ರಂದು ಮಧ್ಯಾಹ್ನ  ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ಕಾಲೇಜು ಹಿಂಭಾಗದಲ್ಲಿರುವ ವಿಜಯಂತ್ ಎಂಬುವವರ ಅಂಗಡಿಯ ಸಮೀಪ ನಡೆದುಕೊಂಡು ಹೋಗುವಾಗ ಆಪಾದಿತರಾದ ಯತೀಶ್ ಮತ್ತು ಹರ್ಷ ಎಂಬವರು ವಿನೋದ್ ಹಾಗೂ ಇತರ ಇಬ್ಬರ ಜೊತೆ ಕಾರು ನಂಬ್ರ KA-20-ME-9505 ನೇಯದರಲ್ಲಿ ಬಂದು ತಡೆದು ನಿಲ್ಲಿಸಿ, ಯತೀಶ್ ಹಾಕಿ ಸ್ಟಿಕ್ ನಿಂದ ಹಲ್ಲೆ ನಡೆಸಿದ್ದು, ವಿನೋದ್ ಕೈಯ್ಯಲ್ಲಿ ಚೂರಿಯನ್ನು ಹಿಡಿದುಕೊಂಡು ಕೊಲ್ಲುವುದಾಗಿ ಬೆದರಿಕೆ ಹಾಕಿ ಕೈಯಿಂದ ಹಲ್ಲೆ ನಡೆಸಿದ್ದು ಉಳಿದವರು ಕೂಡಾ ಕೈಗಳಿಂದ ಹಲ್ಲೆ ನಡೆಸಿ, ಅವರು ಬಂದ ಕಾರಿನಲ್ಲಿ ವಾಪಾಸು ಹೋಗಿದ್ದಾರೆ ಎಂದು ದೂರು ನೀಡಿದ್ದಾರೆ.

ಸಾತ್ವಿಕ್ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ: 189(2),191(2), 191(3), 126(2), 118(1), 351 ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!