
ಮಣಿಪಾಲ: ದಿನಾಂಕ:12-02-2025(ಹಾಯ್ ಉಡುಪಿ ನ್ಯೂಸ್) ಕುಕ್ಕಿಕಟ್ಟೆ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಮದ್ಯಪಾನ ಮಾಡುತ್ತಾ ಸಾರ್ವಜನಿಕ ಶಾಂತಿ ಭಂಗ ಮಾಡಿದ ಮೂವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 11/02/2025 ರಂದು ಉಡುಪಿ ಕುಕ್ಕಿಕಟ್ಟೆ ಜೋಡುರಸ್ತೆ ಬಳಿ ಇರುವ ನಿರ್ಮಲ ಬಾರ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನೆಲದಲ್ಲಿ ಕೂತು 1. ರಮೇಶ್, 2.ಶಂಕರ, 3.ಯಮುನಪ್ಪ ಎಂಬವರು ಮದ್ಯಪಾನ ಮಾಡಿಕೊಂಡು ಅನುಚಿತವಾಗಿ ವರ್ತಿಸುತ್ತ ಏರು ಧ್ವನಿಯಲ್ಲಿ ಮಾತನಾಡಿಕೊಂಡು ನೆಲದ ಮೇಲೆ ಮದ್ಯದ ಸ್ಯಾಚೆಟ್ ಮತ್ತು ಪ್ಲಾಸ್ಟಿಕ್‌ಲೋಟ , ನೀರಿನ ಬಾಟಲಿ ಇಟ್ಟುಕೊಂಡು ಅಮಲು ಪದಾರ್ಥ ಸೇವಿಸಿ ಕೊಂಡಿದ್ದು ಸಾರ್ವಜನಿಕ ದೂರಿನ ಮೇರೆಗೆ ಮಣಿಪಾಲ ಪೊಲೀಸರು ಈ ಮೂವರನ್ನು ಬಂಧಿಸಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 15(A) KE Act ರಂತೆ ಪ್ರಕರಣ ದಾಖಲಾಗಿದೆ.