Spread the love

ಅಜೆಕಾರು: ದಿನಾಂಕ : 05.02.2025 (ಹಾಯ್ ಉಡುಪಿ ನ್ಯೂಸ್) ಬಂಗ್ಲೆ ಗುಡ್ಡೆ ರಸ್ತೆಯಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ಅಜೆಕಾರು ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಕುಮಾರ್ ಆರ್ ಅವರು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಿದ್ದಾರೆ.

ಅಜೆಕಾರು ಪೊಲೀಸ್ ಠಾಣೆ ಪಿಎಸ್ಐ ಯವರಾದ ಪ್ರವೀಣ್ ಕುಮಾರ್ ಆರ್ ಅವರು ದಿನಾಂಕ: 05-02-2025 ರಂದು, ಕೆರ್ವಾಶೆಯ ಬಂಗ್ಲೆಗುಡ್ಡೆ ಜಂಕ್ಷನ್‌ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ  ಕೆರ್ವಾಶೆ ಕಡೆಯಿಂದ ಅತಿವೇಗವಾಗಿ ಬಂದಿರುವ KA 20 C 3753 ನಂಬ್ರದ ಟಿಪ್ಪರ್‌ ಲಾರಿಯನ್ನು ತಡೆದು ನಿಲ್ಲಿಸಿದಾಗ ಅದರ ಚಾಲಕ ಲಾರಿಯನ್ನುನಿಲ್ಲಿಸಿ ಇಳಿದು ಓಡಲು ಪ್ರಯತ್ನಿಸಿದ್ದು ಆತನನ್ನು ಪೊಲೀಸರು ಹಿಡಿದು, ಪರಿಶೀಲಿಸಿದಾಗ ಲಾರಿಯ ಹಿಂಬದಿ ಬಾಡಿಯಲ್ಲಿ 3 ಯುನಿಟ್ ನಷ್ಟು ಮರಳು ತುಂಬಿರುವುದು ಕಂಡುಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ  ಚಾಲಕನು ಲಾರಿ ಮಾಲಕ ವಿಘ್ನೇಶ ರವರ ಸೂಚನೆಯಂತೆ ಮರಳನ್ನು ಕಳವು ಮಾಡಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ KA 20 C 3753 ವಾಹನದಲ್ಲಿ ಸಾಗಾಟ ಮಾಡುತ್ತಿದ್ದು ಇವರುಗಳು ಸಂಘಟಿತ ಅಪರಾಧ ಎಸಗಿರುವುದು ಕಂಡುಬಂದಿರುವುದರಿಂದ ಈ ಮರಳು ತುಂಬಿರುವ ವಾಹನವನ್ನು ಪೊಲೀಸರು  ಸ್ವಾಧೀನಪಡಿಸಿಕೊಂಡಿದ್ದು , ಮರಳಿನ ಮೌಲ್ಯ ರೂ. 15,000/- ಹಾಗೂ ವಾಹನದ ಮೌಲ್ಯ ಅಂದಾಜು ರೂ. 5,00,000/- ಆಗಬಹುದು ಎಂದು ದೂರಲಾಗಿದೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ  ಕಲಂ: 303(2),112 BNS, 4,4(A) 21 MMDR Act ರಂತೆ ಪ್ರಕರಣ ದಾಖಲಾಗಿದೆ.

error: No Copying!