Spread the love
  • ಮಣಿಪಾಲ: ದಿನಾಂಕ:05-02-2025 (ಹಾಯ್ ಉಡುಪಿ ನ್ಯೂಸ್) ವಿದ್ಯಾರತ್ನ ನಗರದ ವೈನ್ ಶಾಪ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಮೂವರು ಯುವಕರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
  • ದಿನಾಂಕ : 04/02/2025 ರಂದು  ಶಿವಳ್ಳಿ ಗ್ರಾಮದ ವಿಧ್ಯಾರತ್ನ ನಗರದ ತಲ್ಲೂರ್‌ ವೈನ್ಸ್‌ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮೂವರು ಯುವಕರು ಮದ್ಯಪಾನ ಸೇವಿಸಲು ಅನುಮತಿ ಇಲ್ಲದೇ ಇದ್ದರೂ ಸಹ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1.ಗಣೇಶ್‌, 2. ನಮೀತ್‌, 3. ರಾಕೇಶ್‌ ಎಂಬವರು ಮದ್ಯ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ ಬಗ್ಗೆ ಮಾಹಿತಿ ಬಂದ ಕೂಡಲೇ ಮಣಿಪಾಲ ಪೊಲೀಸರು ಸ್ಥಳಕ್ಕೆ ತೆರಳಿ ಮೂವರು ಯುವಕರನ್ನು ಬಂಧಿಸಿದ್ದಾರೆ.
  • ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 15 (A) Karnataka Excise Act ರಂತೆ ಪ್ರಕರಣ ದಾಖಲಾಗಿದೆ.

error: No Copying!