IMG_20250207_000315.jpg
Spread the love

ಉಡುಪಿ: ದಿನಾಂಕ:06-02-2025(ಹಾಯ್ ಉಡುಪಿ ನ್ಯೂಸ್) ರಿಕ್ಷಾ ಚಾಲಕರೋರ್ವರಿಗೆ ಕ್ರಿಕೆಟ್ ಆಟ ಆಡುತ್ತಿರುವಾಗ ಮೂವರು ಬಂದು ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಅಂಬಲಪಾಡಿ ಗ್ರಾಮದ ನಿವಾಸಿ ಹರಿಪ್ರಸಾದ (46) ಎಂಬವರು ಆಟೋ ರಿಕ್ಷಾ ಚಾಲಕರಾಗಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 02/02/2025 ರಂದು ಸಂಜೆ  ಅಂಬಲಪಾಡಿ ದೇವಸ್ಥಾನದ ಹಿಂಭಾಗದಲ್ಲಿರುವ ತಮ್ಮ ಮನೆಯ ಬಳಿ ಕ್ರಿಕೆಟ್ ಆಟ ಆಡುತ್ತಿರುವಾಗ ರಾಘವೇಂದ್ರ, ಸುರೇಂದ್ರ ಮತ್ತು ಹರೀಶ ಎಂಬವರು ಆಟ ಆಡುವ ವಿಚಾರದಲ್ಲಿ ಮತ್ತು ಕೆಲಸದ ವಿಚಾರದಲ್ಲಿ ಜಗಳ ತೆಗೆದು  ಹರಿಪ್ರಸಾದರಿಗೆ ವಿಕೇಟ್ ನಿಂದ , ಶೂ ಹಾಗೂ ಚಪ್ಪಲಿಯಿಂದ ಮೂವರೂ ಹೊಡೆದಿದ್ದು ಈ ಏಟಿನಿಂದ ಹರಿಪ್ರಸಾದರ ಹಣೆಗೆ ಗಾಯವಾಗಿ ರಕ್ತ ಬಂದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ  ಕಲಂ: 118(1) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!