
ಬ್ರಹ್ಮಾವರ: ದಿನಾಂಕ:03-02-2025(ಹಾಯ್ ಉಡುಪಿ ನ್ಯೂಸ್) ಪತ್ನಿ ಯು ಇತರರೊಂದಿಗೆ ಸೇರಿಕೊಂಡು ತನಗೆ 9ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಗಂಡ ಪೊಲೀಸರಿಗೆ ದೂರು ನೀಡಿದ್ದಾನೆ.
ಬ್ರಹ್ಮಾವರ ತಾಲೂಕು ಕಾಡೂರು ಗ್ರಾಮದ ನಿವಾಸಿ ಮಹೇಂದ್ರ (32) ಎಂಬವರು ದಿನಾಂಕ: 12-04-2024 ರಂದು ಹೊಸಂಗಡಿ ಗ್ರಾಮದ ಮುತ್ತನಕಟ್ಟೆ ವಾಸಿ 1ನೇ ಆರೋಪಿತೆ ನಿಶಾ ಎಂಬವರನ್ನು ಮದುವೆ ಆಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆಯ ಖರ್ಚು ವೆಚ್ಚ ಹಾಗೂ ಆರೋಪಿತೆ ನಿಶಾಳಿಗೆ ಚಿನ್ನಾಭರಣಗಳನ್ನು ಮಹೇಂದ್ರ ರವರ ತಂದೆಯವರು ಮಾಡಿಸಿದ್ದು, ಮದುವೆಯ ನಂತರ ಒಂದೆ ತಿಂಗಳಲ್ಲಿ ಆರೋಪಿತೆ ಪತ್ನಿ ನಿಶಾಳು ಮಹೇಂದ್ರ ರವರನ್ನು ಬೇಕರಿ ಕೆಲಸದ ಬಗ್ಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವ ಸಮಯ ನಿಶಾಳು ಮಹೇಂದ್ರರವರ ಹಾಗೂ ಮಹೇಂದ್ರರವರ ತಂದೆ ಮಾಡಿದ ಚಿನ್ನದ ಒಡವೆಯನ್ನು ಮಹೇಂದ್ರರವರ ವೈಯಕ್ತಿಕ ಬೀರುವಿನಲ್ಲಿ ಇಟ್ಟು, ಎರಡೂ ಕೀಲಿಗಳನ್ನು ಬ್ಯಾಗಿನಲ್ಲಿರಿಸಿ, ಹೋಗಿರುತ್ತಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ನಿ ನಿಶಾಳಿಗೆ ಅವಳ ಪರಿಚಯದ 3ನೇ ಆರೋಪಿ ಸಂತೋಷ ಎಂಬವನು ಅಂಗಡಿ ಕೋಣೆ ಬಾಡಿಗೆಗೆ ಗೊತ್ತು ಮಾಡಿಕೊಟ್ಟು, ನಿಶಾಳು ಬಾಡಿಗೆ ಕರಾರು ದಾಖಲಾತಿಯನ್ನು ಅವರ ಹೆಸರಿಗೆ ಮಾಡಿಸಿಕೊಂಡಿರುತ್ತಾಳೆ ಎಂದು ದೂರಿದ್ದಾರೆ. ಮಹೇಂದ್ರರವರು ಬೇಕರಿ ವ್ಯವಹಾರಕ್ಕೆ 4 ಲಕ್ಷ ರೂ ಹಣವನ್ನು ಹಾಕಿದ್ದಾರೆ ಮತ್ತು ಪತ್ನಿ ನಿಶಾಳ ಮಾನಸಿಕ ಹಿಂಸೆಯಿಂದ ಮಹೇಂದ್ರರವರು ಅಸಹಾಯಕರಾಗಿ ಕಾಡೂರಿನ ಮನೆಗೆ ಬಂದು ಬೀಗ ಹಾಕಿದ ವೈಯಕ್ತಿಕ ಬೀರುವನ್ನು ತೆರೆದು ನೋಡಿದಾಗ ಒಡವೆಗಳು ಕಾಣದೆ ಇದ್ದು, ಆಗ ಮಹೇಂದ್ರ ಅವರು ತಂದೆಯವರಲ್ಲಿ ವಿಚಾರಿಸಿದಾಗ 2ನೇ ಆರೋಪಿತೆ ಶೋಭಾಳು ನೀವು ಬೆಂಗಳೂರಿಗೆ ಹೋದ ಸುಮಾರು 15 – 20 ದಿನದಲ್ಲಿ ಮನೆಗೆ ಬಂದು 1ನೇ ಆರೋಪಿ ನಿಶಾಳು ತಿಳಿಸಿದಂತೆ ಬೀರುವಿನಲ್ಲಿದ್ದ ಸೀರೆ ತೆಗೆದುಕೊಂಡು ಬರಲು ಕೀಲಿ ನೀಡಿ ಕಳುಹಿಸಿರುವುದಾಗಿ ತಿಳಿಸಿದ್ದು, ಇದನ್ನು ನಂಬಿದ ತಂದೆ ಗಂಡ ಹೆಂಡತಿಯ ವಿಚಾರವಾಗಿರುವುದರಿಂದ ಆಕ್ಷೇಪಿಸಿರುವುದಿಲ್ಲ ಎಂದು ತಿಳಿಸಿರುತ್ತಾರೆ ಎಂದು ಮಹೇಂದ್ರ ದೂರಿನಲ್ಲಿ ತಿಳಿಸಿದ್ದಾರೆ.
2ನೇ ಆರೋಪಿತೆ ಶೋಭಾಳು ಮಹೇಂದ್ರ ಅವರ ಬೀರುವಿನಲ್ಲಿದ್ದ ಚಿನ್ನದ ಒಡವೆಗಳನ್ನು ಮೋಸದಿಂದ ತೆಗೆದುಕೊಂಡು ಹೋಗಿ ಕುಂದಾಪುರ ತಾಲೂಕಿನ ಹೊಸಂಗಡಿಯ ಸೇವಾ ಸಹಕಾರಿ ಸಂಘದಲ್ಲಿ ಅವರ ಹೆಸರಿನಲ್ಲಿ 4.50 ಲಕ್ಷಕ್ಕೆ ಗಿರವಿ ಇಟ್ಟಿರುತ್ತಾರೆ. ಆರೋಪಿ 1 ನಿಶಾ ಮತ್ತು 2 ನೇ ಶೋಭ 3ನೇ ಆರೋಪಿ ಸಂತೋಷರೊಂದಿಗೆ ಸೇರಿಕೊಂಡು ಮಹೇಂದ್ರ ರವರಿಗೆ ಸಂಬಂಧಿಸಿದ ಒಟ್ಟು 119.62 ಗ್ರಾಂ (ರೂ. 8,83,056/-) ಒಡವೆಗಳನ್ನು ಗೊತ್ತಾಗದಂತೆ ಮೋಸದಿಂದ ಸಾಗಿಸಿ, ಮಹೇಂದ್ರ ರವರಿಗೆ ನಂಬಿಕೆ ದ್ರೋಹ ಮಾಡಿರುವ ಬಗ್ಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 406, 424 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.