Spread the love

ಬ್ರಹ್ಮಾವರ: ದಿನಾಂಕ 29/01/2025(ಹಾಯ್ ಉಡುಪಿ ನ್ಯೂಸ್) ಕೆಂಜೂರು ಗ್ರಾಮದ ಬಲ್ಲೆಬೈಲು ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬ್ರಹ್ಮಾವರ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಶೋಕ ಮಾಳಾಬಗಿ ಅವರು ದಾಳಿ ನಡೆಸಿ 12 ಜನರನ್ನು ಬಂಧಿಸಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಶೋಕ ಮಾಳಾಬಗಿ ಅವರು ದಿನಾಂಕ:28-01-2025 ರಂದು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ ಸಮಯ  ಠಾಣೆಯ ಸಿಬ್ಬಂದಿಯವರು ಕರೆ ಮಾಡಿ ಬ್ರಹ್ಮಾವರ ತಾಲೂಕು ಕೆಂಜೂರು ಗ್ರಾಮದ ಬಲ್ಲೆಬೈಲು ಕೊಳಂಬೆ ಎಂಬಲ್ಲಿಯ ಶಾರದ ಎಂಬವರ ಖಾಲಿ ಸ್ಥಳದಲ್ಲಿ ಕೆಲವು ಜನ ಸೇರಿಕೊಂಡು ಕೋಳಿಗಳನ್ನು ಹಿಂಸಾತ್ಮಕವಾಗಿ ಅವುಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಮನೋರಂಜನೆಗಾಗಿ ಹಾಗೂ ಹಣವನ್ನು ಪಣವಾಗಿ ಕಟ್ಟಿ ಜೂಜಾಟಕ್ಕಾಗಿ ಕೋಳಿ ಅಂಕವನ್ನು ಆಡುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿಯನ್ನು ನೀಡಿದ್ದಾರೆ .

ಕೂಡಲೇ ಠಾಣೆಯ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದಿರುವ ಸ್ಥಳಕ್ಕೆ  ಧಾಳಿ ನಡೆಸಿದಾಗ ಅಲ್ಲಿ ಸೇರಿದ್ದ ಜನರು ಓಡಿಹೋಗಿದ್ದು ಓಡಿ ಹೋಗುತ್ತಿದ್ದವರ ಪೈಕಿ 12 ಜನರಾದ ಪ್ರವೀಣ್‌ ಕುಮಾರ್‌ ನಾಲ್ಕೂರು ಅಂಚೆ & ಗ್ರಾಮ, ಪ್ರಭಾಕರ ( 49)ನಾಲ್ಕೂರು ಅಂಚೆ & ಗ್ರಾಮ,ಸುರೇಶ (32)ನಡೂರು ಅಂಚೆ & ಗ್ರಾಮ,ಉಮೇಶ್‌(53), ಕೆಂಜೂರು ಅಂಚೆ & ಗ್ರಾಮ,ಹರೀಶ್‌ ಕುಮಾರ್‌ (38)ಚೇರ್ಕಾಡಿ ಅಂಚೆ & ಗ್ರಾಮ, ಗಣೇಶ್‌ (30)ಬೊಮ್ಮರ್‌ಬೆಟ್ಟು ಗ್ರಾಮ,ಅಜೆಯ್‌ (23) ಹೆಬ್ರಿ ತಾಲೂಕು, ಮಂಜುನಾಥ (32)ಹೊಸೂರು ಗ್ರಾಮ,ದಿನೇಶ್‌ (49)ಬ್ರಹ್ಮಾವರ ತಾಲೂಕು. ಸದಾಶಿವ (49)ಸಂತೆಕಟ್ಟೆ ಅಂಚೆ ಕಳ್ತೂರು ಗ್ರಾಮ,11) ಹರೀಶ (39)ಬ್ರಹ್ಮಾವರ ತಾಲೂಕು. ರಾಘವೇಂದ್ರ (34)ಬ್ರಹ್ಮಾವರ ತಾಲೂಕು, ಎಂಬವರನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ಬಂಧಿಸಿದ್ದಾರೆ.

ಬಂಧಿತರಿಂದ ಒಟ್ಟು ನಗದು 21,700/- ರೂ , ಸ್ಥಳದಲ್ಲಿ ಜೂಜಿಗೆ ಕಟ್ಟಿದ 3 ಕೋಳಿಗಳು, ಕೋಳಿಗಳ ಕಾಲಿಗೆ ಕಟ್ಟಿದ 2 ಕೋಳಿ ಬಾಳ್, ಕೋಳಿಯ ಕಾಲಿಗೆ ಕಟ್ಟಿದ 1 ನೈಲಾನ್‌ ಹಗ್ಗ ಹಾಗೂ ಆರೋಪಿತರಿಗೆ ಸೇರಿರುವ ಒಟ್ಟು 9 ದ್ವಿಚಕ್ರ ವಾಹನಗಳನ್ನು  ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ  : ಕಲಂ 112 BNS And US 87 93 KP Act US 11 Prevention of Cruelty to Animals Act ರಂತೆ ಪ್ರಕರಣ ದಾಖಲಾಗಿದೆ.

error: No Copying!