
- ಮಣಿಪಾಲ: ದಿನಾಂಕ:28-01-2025(ಹಾಯ್ ಉಡುಪಿ ನ್ಯೂಸ್) ಮುಂಬೈನಿಂದ ತ್ರಿಶೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರ ಬ್ಯಾಗನ್ನು ಯಾರೋ ಕಳವು ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ತ್ರಿಶೂರ್ ,ಆನಂದಪುರಂ ನಿವಾಸಿ ಸಿಸಿಲಿ ಥಾಮಸ್ ಎಂಬವರು ರೈಲುಗಾಡಿ ಸಂಖ್ಯೆ 16345 ನೇತ್ರಾವತಿ ಎಕ್ಸಪ್ರೆಸ್ , ರೈಲುಗಾಡಿಯಲ್ಲಿ A2 ಕೋಚ್, ಸೀಟ್ ನಂ.25 ರಲ್ಲಿ ಸಂಬಂಧಿಕರೊಂದಿಗೆ ಮುಂಬೈನಿಂದ ತ್ರಿಶೂರ್ ಗೆ ಪ್ರಯಾಣ ಮಾಡಿದ್ದು, ದಿನಾಂಕ 04-10-2024 ರಂದು ಸಮಯ ಬೆಳಿಗ್ಗೆ ಸುಮಾರು 07-20 ಗಂಟೆಗೆ ರೈಲುಗಾಡಿ ಮಂಗಳೂರು ರೈಲ್ವೆ ನಿಲ್ದಾಣವನ್ನು ತಲುಪಿದಾಗ, ತಮ್ಮ ತಲೆಯ ಬದಿ ಇಟ್ಟುಕೊಂಡಿದ್ದ ಬ್ಯಾಗನ್ನು ಯಾರೋ ಕಳುವು ಮಾಡಿದ್ದು, ಅದರಲ್ಲಿ 11 ಸವರಿನ್ ಬಂಗಾರದ ಆಭರಣಗಳು ಮತ್ತು ನಗದು ಹಣ 1,20,000/-ರೂ.ಗಳ ಒಟ್ಟು ಮೌಲ್ಯ 7,25,000/- ರೂ.ಗಳು ಆಗಿರುತ್ತದೆ ಎಂದು ಪೊಲೀಸರಿಗೆ ತಡವಾಗಿ ದೂರು ನೀಡಿದ್ದಾರೆ.
- ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 305(C) BNS ರಂತೆ ಪ್ರಕರಣ ದಾಖಲಾಗಿದೆ.