Spread the love

ಮಲ್ಪೆ: ದಿನಾಂಕ:27-01-2025(ಹಾಯ್ ಉಡುಪಿ ನ್ಯೂಸ್) ಹೋಮ್ ಸ್ಟೇ ಒಂದರ ಅಡುಗೆ ಸಹಾಯಕ ಕೆಲಸಗಾರ ತಾನು ಕೆಲಸ ಬಿಡುವ ವಿಚಾರದಲ್ಲಿ ಮೆನೇಜರ್ ನೊಂದಿಗೆ ಜಗಳಮಾಡಿ ಚಾಕು ಚುಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ: 24/01/2025 ರಂದು ರಾತ್ರಿ ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟುವಿನಲ್ಲಿರುವ ಭೈರವಿ ಹೋಮ್‌ ಸ್ಟೇ ಕಟ್ಟಡದ ಒಳಗೆ ಅಡುಗೆಕೋಣೆ ಬಳಿ ಆರೋಪಿತ ಶ್ರೀಕಾಂತ ಯಾನೆ ರಾಜು (30) ಎಂಬಾತನು ತಾನು ಕೆಲಸ ಬಿಡುವ ವಿಚಾರವಾಗಿ  ಹೋಮ್‌ ಸ್ಟೇ ನ ಮೆನೇಜರ್‌ ಗುರುರಾಜ್‌ (33) ಎಂಬವರಲ್ಲಿ ಮಾತಿಗೆ ಮಾತು ಬೆಳೆಸಿ, ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಗುರುರಾಜ್‌ ನನ್ನು ಕೊಲೆ ಮಾಡುವ ಉದ್ದೇಶದಿಂದ ಅಲ್ಲೇ ಅಡುಗೆ ಕೋಣೆಯಲ್ಲಿದ್ದ ಒಂದು ಚಾಕುವನ್ನು ತೆಗೆದುಕೊಂಡು ಗುರುರಾಜ್‌ ನ ಹೊಟ್ಟೆಯ ಬಲಭಾಗಕ್ಕೆ ಇರಿದು, ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಮಾರುತಿ (27) ಸಿದ್ದಾಪುರ, ಚಿಕ್ಕ ಬಾಸೂರ,ಬ್ಯಾಡಗಿ ತಾ,ಹಾವೇರಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ  ಕಲಂ: 352, 109 BNS 2023 ರಂತೆ ಪ್ರಕರಣ ದಾಖಲಾಗಿದೆ.

error: No Copying!