
ಕುಂದಾಪುರ: ದಿನಾಂಕ:26-01-2025 (ಹಾಯ್ ಉಡುಪಿ ನ್ಯೂಸ್ ) ಕುಂದಾಪುರ ಐ ಬಿ.ಯಲ್ಲಿ ಕನಾ೯ಟಕ ದಲಿತ ಸಂಘರ್ಷ ಸಮಿತಿ (ರಿ)ಭೀಮವಾದ. ರಿ.ನಂ.31/2005/06 ಉಡುಪಿ ಜಿಲ್ಲೆಯ ಸರ್ವ ಸದಸ್ಯರ ಸಭೆ ರಾಜ್ಯ ಸಂಘಟನಾ ಸಂಚಾಲಕರಾದ ವಿಶ್ವನಾಥ್ ಬೆಳ್ಳಂಪಳ್ಳಿ ಅವರ ಅಧ್ಯಕ್ಷತೆಯಲ್ಲಿ ಜರಗಿದ್ದು ಸಭೆಯಲ್ಲಿ ಉಡುಪಿ ಜಿಲ್ಲಾ ಸಮಿತಿಯನ್ನು ಪುನಃ ರಚಿಸಲಾಯಿತು. ಜಿಲ್ಲಾ ಸಂಚಾಲಕರಾಗಿ.ಚಂದ್ರಶೇಖರ್ ಗುಲ್ವಾಡಿ ,ಜಿಲ್ಲಾ ಖಜಾಂಚಿ.ಶೀನ ಗುಜ್ಜಾಡಿ.ಸಂಘಟನಾ ಸಂಚಾಲಕರುಗಳಾಗಿ.ಚಂದ್ರ ಸಾಸ್ತಾನ.ನಾಗರಾಜ ಕೆಂಚನೂರು.ಸತೀಶ ಕಂಚೂಗೂಡು.ಸುಧಾಕರ ಕಾರ್ಕಳ. ಶಿವಣ್ಣ ಮುನಿಯಾಲು.ಸದಾನಂದ ಕಾಪು.ಚಂದ್ರಶೇಖರ್ ಉಡುಪಿ.ರಾಜೇಶ್ ಕೆಳಾರ್ಕಳಬೆಟ್ಟು.ಕೃಷ್ಣ ವಂಡ್ಸೆ.ರಮೇಶ್ ಕಾರ್ಕಳ. ಚಂದ್ರಶೇಖರ ಹಂಗಾರಕಟ್ಟೆಯವರನ್ನೊಳಗೊಂಡ ಜಿಲ್ಲಾ ಸಮಿತಿ ರಚಿಸಲಾಯಿತು.
ಜಿಲ್ಲಾ ಮಹಿಳಾ ಸಮಿತಿಯ ಜಿಲ್ಲಾ ಸಂಚಾಲಕಿಯಾಗಿ ಮಹಾಲಕ್ಷ್ಮಿ ಬೈಂದೂರು. ಸಂಘಟನಾ ಸಂಚಾಲಕಿಯಾಗಿ ಶೋಭ ಹರಿಖಂಡಿಗೆ ,ರಕ್ಷ,ಬೇಬಿ,.ಸುಜಾತ,.ಶೋಭ ಕುಂದಾಪುರ ಇವರೆಲ್ಲರನ್ನು ಸವಾ೯ನುಮತದಿಂದ ಆಯ್ಕೆ ಮಾಡಲಾಯಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.