Spread the love

ಶಂಕರನಾರಾಯಣ: ದಿನಾಂಕ: 21-01-2025 (ಹಾಯ್ ಉಡುಪಿ ನ್ಯೂಸ್) ಅಜ್ರಿ ಗ್ರಾಮದ ಸರ್ಕಾರಿ ಹಾಡಿಯಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಶಂಕರನಾರಾಯಣ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ಅವರು ದಾಳಿ ನಡೆಸಿ ಈರ್ವರನ್ನು ಬಂಧಿಸಿದ್ದಾರೆ.

ಶಂಕರನಾರಾಯಣ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ಅವರು ದಿನಾಂಕ 20/01/2025 ರಂದು ಆಜ್ರಿ ಗ್ರಾಮದ ಗೊವೆಹಾಡಿ ಎಂಬಲ್ಲಿ ಸರ್ಕಾರಿ ಹಾಡಿಯಲ್ಲಿ ಕೆಲವು ಜನ ಸಂಘಟಿತರಾಗಿ ಸೇರಿಕೊಂಡು ಕೋಳಿಗಳನ್ನು ಹಿಂಸಾತ್ಮಕವಾಗಿ ಅವುಗಳ ಕಾಲಿಗೆ ಬಾಳು ಕತ್ತಿಯನ್ನು ಕಟ್ಟಿ ಕೋಳಿ ಅಂಕ ಆಟ ಅಡುತ್ತಿದ್ದಲ್ಲಿಗೆ  ದಾಳಿ ನಡೆಸಿ ಆಪಾದಿತರಾದ ಯೊಗೀಶ್ ಮತ್ತು ಉದಯ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದಿದ್ದು ಉಳಿದ ಆಪಾದಿತರಾದ ಶರತ್ , ಮಾಧವ, ಅರುಣ , ಗಣೇಶ್ ಮತ್ತು ಮಂಜುನಾಥ ಇವರುಗಳು ತಪ್ಪಿಸಿಕೊಂಡು ತಲೆಮರೆಸಿಕೊಂಡಿರುತ್ತಾರೆ ಎನ್ನಲಾಗಿದೆ.

ಸ್ಥಳದಲ್ಲಿ ಕೋಳಿ ಅಂಕ ಆಟದ ಬಗ್ಗೆ ಉಪಯೋಗ ಮಾಡಿದ ಕೋಳಿ ಅಂಕ ಜುಗಾರಿಗೆ ಬಳಸಿದ ಕೋಳಿ ಹುಂಜ-3, ಕೋಳಿ ಕತ್, ಕೋಳಿ ಕಾಲಿಗೆ ಕೋಳಿಬಾಳನ್ನು ಕಟ್ಟಲು ಬಳಸಿದ ಹಗ್ಗ, ಕೋಳಿಗಳನ್ನು ತುಂಬಲು ಬಳಸಿದ ಬೀಣಿ ಚೀಲ ಹಾಗೂ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿದ ನಗದು ಹಣ 1,850/- ರೂಪಾಯಿ, ಆಪಾದಿತರ ವಶದಲ್ಲಿದ್ದ ಮೊಬೈಲ್, ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ  ಕಲಂ: 112 BNS ಕಲಂ: 11(1)(ಎ) Prevention of cruelty of animal act ಮತ್ತು ಕಲಂ: 87 93 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: No Copying!