Spread the love

ಬ್ರಹ್ಮಾವರ: ದಿನಾಂಕ:20-01-2025 (ಹಾಯ್ ಉಡುಪಿ ನ್ಯೂಸ್) ಟ್ರೇಡಿಂಗ್ ಆನ್ಲೈನ್ ಆಪ್ ಮೂಲಕ ಟ್ರೇಡಿಂಗ್ ನಲ್ಲಿ ಲಾಭ ಗಳಿಸುವ ಆಸೆ ತೋರಿಸಿ ಮಹಿಳೆಯೋರ್ವರಿಗೆ ಆನ್ಲೈನ್ ಮೂಲಕ 13 ಲಕ್ಷ ವಂಚನೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.

ಬ್ರಹ್ಮಾವರ ,ಬಾರ್ಕೂರು ಅಂಚೆ, ಹೊಸಾಳ ಗ್ರಾಮದ ನಿವಾಸಿ ದೀಪಶ್ರೀ (32)ಎಂಬವರು coinstore ಎನ್ನುವ ಟ್ರೇಡಿಂಗ್‌ Online App ನ್ನು ಇನ್‌ಸ್ಟಾಲ್‌ ಮಾಡಿಕೊಂಡು ಟ್ರೇಡಿಂಗ್‌ ಮಾಡಲು ಶುರು ಮಾಡಿದ್ದು ಈ Appನ ಬಗ್ಗೆ ಮಾಹಿತಿ ಪಡೆಯಲು ದೀಪಶ್ರೀ ರವರು ಕಸ್ಟ್‌ಮರ್‌ ಸರ್ವೀಸ್‌ ಗೆ ಕರೆ ಮಾಡಿದಾಗ ಯಾರೋ ಅಪರಿಚಿತರು ಅವರ ನಂಬ್ರದಿಂದ ಮೆಸೇಜ್‌ ಮಾಡಿ, ನಂತರ ಟೆಲಿಗ್ರಾಂ App ಮುಖಾಂತರ ಸಂಪರ್ಕಿಸಿ, ದೀಪಶ್ರೀ ರವರಿಗೆ ಅಕೌಂಟ್‌ನಲ್ಲಿ ಹಣವನ್ನು ಡಿಪಾಸಿಟ್ ಮಾಡುವ ಬಗ್ಗೆ ಮಾಹಿತಿ ಹಾಗೂ ಅದರ ಲಾಭಾಂಶದ ಬಗ್ಗೆ ಮಾಹಿತಿ ನೀಡಿ, ದೀಪಶ್ರೀ ರವರಿಂದ ಹಾಗೂ ಅವರ ತಂಗಿಯ ಖಾತೆಯಿಂದ ಹಂತ ಹಂತವಾಗಿ Phonepe, Googlepay, RTGS ಹಾಗೂ NEFT ಮುಖಾಂತರ ದಿನಾಂಕ 13/01/2025 ರಿಂದ ದಿನಾಂಕ: 18/01/2025 ರ ಮಧ್ಯಾವಧಿಯಲ್ಲಿ ಒಟ್ಟು ರೂ. 12,78,640/- ಹಣವನ್ನು ಆರೋಪಿತರ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆ ನಂತರ ಯಾವುದೇ ಲಾಭಾಂಶ ನೀಡದೇ ದೀಪಶ್ರೀ ಅವರ ತಂಗಿಯ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ .

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ  U/S 66 (C), 66 (D) IT ACT ರಂತೆ ಪ್ರಕರಣ ದಾಖಲಾಗಿದೆ.

error: No Copying!