
ಪ್ರಯಾಗರಾಜ್ (ಉ.ಪ್ರ): ದಿನಾಂಕ:19-01-2025(ಹಾಯ್ ಉಡುಪಿ ನ್ಯೂಸ್)
ಪ್ರಯಾಗ ರಾಜ್ ಮಹಾಕುಂಭ ಮೇಳ ಕ್ಷೇತ್ರದ ಟೆಂಟ್‌ನಲ್ಲಿ ಸಿಲಿಂಡರ್ ಸ್ಫೋಟದಿಂದ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಮಹಾ ಕುಂಭಮೇಳ ಕ್ಷೇತ್ರದ ಶಾಸ್ತ್ರಿ ಬ್ರಿಜ್ ಸೆಕ್ಟರ್ 19ರ ಕ್ಯಾಂಪ್ ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ.ಕೂಡಲೇ ಹಲವಾರು ಅಗ್ನಿ ಶಾಮಕ ಯಂತ್ರಗಳು ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಸಿದ್ದು ಬೆಂಕಿಯನ್ನು ಹತೋಟಿಗೆ ತರಲಾಗಿದೆ.ತಕ್ಷಣ ಸಿಎಂ ಯೋಗಿ ಆದಿತ್ಯನಾಥ್ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಾಚರಣೆ ವೀಕ್ಷಿಸಿದರು.
