
ಬ್ರಹ್ಮಾವರ: ದಿನಾಂಕ: 19/01/2025 (ಹಾಯ್ ಉಡುಪಿ ನ್ಯೂಸ್ ) ವಾರಂಬಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಪು ಕಲ್ಲು ಕಳ್ಳಸಾಗಾಣಿಕೆ ನಡೆಸುತ್ತಿದ್ದ ಟಿಪ್ಪರ್ ಲಾರಿಯನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಶೋಕ್ ಮಾಳಾಬಗಿ ಅವರು ವಶಪಡಿಸಿಕೊಂಡಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆ, ಪೊಲೀಸ್ ಉಪ ನಿರೀಕ್ಷಕರಾದ ಅಶೋಕ್ ಮಾಳಾಬಗಿ ಅವರು ದಿನಾಂಕ:18-01-2025 ರಂದು ಸಿಬ್ಬಂದಿಯವರೊಂದಿಗೆ ವಾರಂಬಳ್ಳಿ ಗ್ರಾಮದ ಎಸ್‌ಎಮ್‌ಎಸ್ ಕಾಲೇಜಿನ ಎದುರುಗಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಉಡುಪಿ ಕಡೆಯಿಂದ KA-19 B-9533 ನೇ ನೊಂದಣಿ ನಂಬ್ರದ ಟಿಪ್ಪರ್ ಲಾರಿಯಲ್ಲಿ ಕೆಂಪು ಕಲ್ಲುಗಳನ್ನು ತುಂಬಿಸಿಕೊಂಡು ಬರುತ್ತಿರುವುದನ್ನು ನೋಡಿ ಪೊಲೀಸರು ವಾಹನವನ್ನು ನಿಲ್ಲಿಸಿ ಚಾಲಕನನ್ನು ವಿಚಾರಿಸಿದಾಗ ತನ್ನ ಹೆಸರು ಪರಶುರಾಮ ಎಂದು ತಿಳಿಸಿದ್ದು ಹಾಗೂ ಟಿಪ್ಪರ್ ಲಾರಿಯಲ್ಲಿದ್ದ ಇನೊಬ್ಬಾತನು ತಾನು ವಾಹನದ ಮಾಲಿಕನಾಗಿದ್ದು ತನ್ನ ಹೆಸರು ಶರಣಪ್ಪ ಬಿರಾದಾರ ಎಂಬುದಾಗಿ ತಿಳಿಸಿರುತ್ತಾರೆ ಎನ್ನಲಾಗಿದೆ.
ಆಪಾದಿತರಾದ ಪರಶುರಾಮ ಹಾಗೂ ಶರಣಪ್ಪ ಬಿರಾದಾರ ಅವರುಗಳು ಕೆಂಪು ಕಲ್ಲು ಸಾಗಾಟ ಮಾಡುವ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಹೊಂದದೇ ಟಿಪ್ಪರ್ ವಾಹನದಲ್ಲಿ 300 ಕೆಂಪು ಕಲ್ಲುಗಳನ್ನು ಮೂಡುಬಿದ್ರೆಯ ನಿಡ್ಡೋಡಿಯಿಂದ ಲೋಡ್ ಮಾಡಿ ಸಾಗಾಟ ಮಾಡಿಕೊಂಡು ಬಂದಿರುವುದು ತನಿಖೆಯಲ್ಲಿ ಕಂಡು ಬಂದಿರುತ್ತದೆ ಎನ್ನಲಾಗಿದೆ.
KA-19 B-9533 ನೇ ನಂಬ್ರದ ಟಿಪ್ಪರ್ ಲಾರಿಯನ್ನು ಅದರಲ್ಲಿರುವ 300 ಕೆಂಪು ಕಲ್ಲುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಆಪಾದಿತರಾದ ಪರಶುರಾಮ ಮತ್ತು ಶರಣಪ್ಪ ಬಿರಾದಾರ ರವರು ಇತರರೊಂದಿಗೆ ಸೇರಿಕೊಂಡು ಸಂಘಟಿತವಾಗಿ ಯಾವುದೇ ಪರವಾನಿಗೆಯನ್ನು ಹೊಂದದೇ ಸುಮಾರು 300 ಕೆಂಪು ಕಲ್ಲುಗಳನ್ನು ಎಲ್ಲಿಯೋ ಕದ್ದು ಸಾಗಾಟ ಮಾಡಿರುವುದು ಕಂಡು ಬಂದಿದೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 4(1A), 21(4) MMDR ACT & US 112, 303(2) BNS ರಂತೆ ಪ್ರಕರಣ ದಾಖಲಾಗಿದೆ.