Spread the love

ಮಣಿಪಾಲ: ದಿನಾಂಕ:18-01-2025 (ಹಾಯ್ ಉಡುಪಿ ನ್ಯೂಸ್) ಶೆಟ್ಟಿ ಬೆಟ್ಟು ಹೊಳೆಬಾಗಿಲು ಸ್ವರ್ಣಾ ನದಿಯಲ್ಲಿ ರಾತ್ರಿ ಹೊತ್ತು ಮರಳು ಕಳ್ಳತನ ನಡೆಸುತ್ತಿದ್ದ ನಾಲ್ವರನ್ನು ಮಣಿಪಾಲ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಅನಿಲ ಕುಮಾರ್.ಡಿ ಅವರು ಬಂಧಿಸಿದ್ದಾರೆ.

ಉಡುಪಿ ತಾಲೂಕು ಹೆರ್ಗ ಗ್ರಾಮದ ಶೆಟ್ಟಿಬೆಟ್ಟು ರಾತ್ರಿ ಬೀಟ್‌ ಪೊಲೀಸ್ ಸಿಬ್ಬಂದಿ ಸುರೇಶ್‌ ಅವರಿಗೆ ದಿನಾಂಕ:17-01-2025 ರಂದು ಉಡುಪಿ ತಾಲೂಕು ಹೆರ್ಗ ಗ್ರಾಮದ ಶೆಟ್ಟಿಬೆಟ್ಟು ಹೊಳೆಬಾಗಿಲು ಎಂಬಲ್ಲಿ ಸ್ವರ್ಣಾ ನದಿಯಲ್ಲಿ ಮರಳು ತೆಗೆಯುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಮಣಿಪಾಲ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಅನೀಲಕುಮಾರ್‌ .ಡಿ , ಪಿ,ಎಸ್‌,ಐ ಮಣಿಪಾಲ ಪೊಲೀಸ್‌ ಠಾಣೆ ರವರು ಸಿಬ್ಬಂದಿಯವರೊಂದಿಗೆ  ದಾಳಿ ಮಾಡಿದ್ದು ಜೀಪಿನ ಬೆಳಕನ್ನು ಕಂಡು ನದಿಯಲ್ಲಿ ಮರಳನ್ನು ತೆಗೆಯುತ್ತಿದ್ದ 3-4 ಜನರು ಪಕ್ಕದ ಕಾಡಿನೊಳಗೆ ಓಡಿ ಪರಾರಿಯಾಗಿದ್ದು KA-09-A-5192 ಹಾಗೂ KA-20-A-7459 ನೇ ನಂಬ್ರದ ಆರ್‌,ಸಿ ಮಾಲಿಕರುಗಳು ಉಳಿದ 03-04 ಆರೋಪಿಗಳೊಂದಿಗೆ ಸಂಘಟಿತರಾಗಿ ಸೇರಿಕೊಂಡು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಸರಕಾರಕ್ಕೆ ಯಾವುದೇ ರಾಯಧನವನ್ನು ಭರಿಸದೇ, ಯಾವುದೇ ಪರವಾನಿಗೆ ಇಲ್ಲದೇ ಸ್ವರ್ಣ ನದಿಯಿಂದ ಮರಳನ್ನು ತೆಗೆದು ಟಿಪ್ಪರ್‌ ನಲ್ಲಿ ಸಾಗಾಟ ಮಾಡಿ ಮಾರಾಟ ಮಾಡುವ ಸಲುವಾಗಿ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ.

ಆರೋಪಿತರುಗಳು ಹೊಳೆಯಿಂದ ತೆಗೆದು ಇರಿಸಿದ ಸುಮಾರು 2 ಯುನಿಟ್‌ ಮರಳು, ಲಾರಿಗಳು, ರಬ್ಬರ್‌ ಬುಟ್ಟಿಗಳು-04, ಕಬ್ಬಿಣದ ಹಾರೆಗಳು-02, ಕಬ್ಬಿಣದ ಸ್ಟಾಂಡ್-01, ಕಬ್ಬಿಣದ ಬಕೆಟ್-01 ಇವುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕಲಂ: 303(2), 112 ಜೊತೆಗೆ 3(5) ಬಿ,ಎನ್‌,ಎಸ್-2023 ಮತ್ತು ಕಲಂ: 4(1)(A) 21(4) MMRD Act ರಂತೆ ಪ್ರಕರಣ ದಾಖಲಾಗಿದೆ.

error: No Copying!