
ಕಾರ್ಕಳ: ದಿನಾಂಕ :16-01-2025(ಹಾಯ್ ಉಡುಪಿ ನ್ಯೂಸ್) ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಶಿಕಾರಿ ಮಾಡಲು ಬಂದಿದ್ದ ಯುವಕರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ .
ಕಾರ್ಕಳ ತಾಲೂಕು ಮಾಳ ಗ್ರಾಮದ ಮುಳ್ಳೂರು ಅರಣ್ಯ ತನಿಖಾ ಠಾಣೆಯಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಯವರು ದಿನಾಂಕ : 09-01-2025 ರಂದು ರಾತ್ರಿ 10-20 ಘಂಟೆಗೆ ನೀಡಿದ ಮಾಹಿತಿಯಂತೆ ಶಶಿಧರ ಪಾಟೀಲ್ , ವಲಯ ಅರಣ್ಯಾಧಿಕಾರಿ, ಕಾರ್ಕಳ ವನ್ಯಜೀವಿ ವಿಭಾಗ, ಅವರು ರಾಜು, ಉಪ ಅರಣ್ಯ ಅಧಿಕಾರಿಯೊಂದಿಗೆ ಕೂಡಲೇ ಸ್ಥಳಕ್ಕೆ ಹೋಗಿ ತನಿಖಾ ಠಾಣೆಯ ಸಿಬ್ಬಂದಿಗಳ ವಶದಲ್ಲಿದ್ದ ಅಪಾದಿತ ಫಜ್ವಿನ್ ಎಂಬಾತನನ್ನು ವಿಚಾರಣೆ ನಡೆಸಿದಾಗ ಅಪಾದಿತನು ತನ್ನ ಗೆಳೆಯ ಸಿನಾನ್ ಎಂಬಾತ ಹಾಗೂ ಆತನ 4 ಜನ ಗೆಳೆಯರೊಂದಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಕಾರು ನಂಬ್ರ KA-19-MK-0414 ರಲ್ಲಿ ಶಿಖಾರಿ ಮಾಡಲು ಹೋಗುವ ಸಮಯ ಅರಣ್ಯ ಅಧಿಕಾರಿಗಳು ಗೇಟ್ ಪಾಸ್ ಪಡೆಯಲು ನಿಲ್ಲಿಸಿದ ಸಮಯ ಪರಿಶೀಲನೆ ಮಾಡಿದಾಗ ಅಪಾದಿತ ಫಜ್ವಿನ್ 6 ಸಜೀವ ಕಾಟ್ರಿಜ್‌ಗಳನ್ನು ರೆಕ್ಸಿನ್ ಬೆಲ್ಟ್ ನಲ್ಲಿ ಸೊಂಟಕ್ಕೆ ಕಟ್ಟಿಕೊಂಡಿದ್ದವನನ್ನು ಬಂಧಿಸಿ ವಶಕ್ಕೆ ಪಡೆದಾಗ ಸಿನಾನ್ ಎಂಬವನು ಕಾರು ಚಲಾಯಿಸಿಕೊಂಡು ಹಾಗೂ ಉಳಿದ ಅಪಾದಿತರು ಕಾಡಿನಲ್ಲಿ ಓಡಿಹೋಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಅಪಾದಿತ ಫಜ್ವಿನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಘಟನೆ ಬಗ್ಗೆ ಕಾರ್ಕಳ ವನ್ಯಜೀವಿ ವಲಯದಲ್ಲಿ ದಿನಾಂಕ 09/01/2025 ರಂದು ಪ್ರಕರಣ ದಾಖಲಿಸಿ ಬಳಿಕ ಕಾರ್ಕಳ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಕಾರ್ಕಳ ಠಾಣೆಗೆ ದೂರು ನೀಡಿದ್ಧಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 7 & 25 ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ..