ಉಡುಪಿ: ದಿನಾಂಕ :10-01-2025 (ಹಾಯ್ ಉಡುಪಿ ನ್ಯೂಸ್) ಯು.ಕೆಯಲ್ಲಿ ಹೆಚ್ಚಿನ ಶಿಕ್ಷಣಕ್ಕಾಗಿ ಸೀಟು ದೊರಕಿಸಿ ಕೊಡುವುದಾಗಿ ನಂಬಿಸಿ ವೈದ್ಯಕೀಯ ವಿದ್ಯಾರ್ಥಿಗೆ 8.5 ಲಕ್ಷ ವಂಚನೆ ಮಾಡಿದ್ದಾರೆ ಎಂದು ಬೆಂಗಳೂರು ಮೂಲದ ವಿದ್ಯಾರ್ಥಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರು ನಿವಾಸಿ ಸಂತೋಷ್ (25) ಎಂಬವರು ಡಾಕ್ಟರ್(General Medicine)ವಿಧ್ಯಾಭ್ಯಾಸವನ್ನು ಮುಗಿಸಿಕೊಂಡಿದ್ದು, ಹೆಚ್ಚಿನ M.PH ವಿಧ್ಯಾಭ್ಯಾಸವನ್ನು ಯುಕೆ ಯಲ್ಲಿ ಮಾಡಬೇಕೆಂದು ಅವರ ಪರಿಚಯದ ಡಾ|ಸುದರ್ಶನ್ ಎಂಬವರಿಗೆ ಕರೆ ಮಾಡಿ ವಿಚಾರಿಸಿದಾಗ ದುಬೈನಲ್ಲಿರುವ 1ನೇ ಆರೋಪಿ ಅಫ್ತಾಬ್ ಎಂಬವರನ್ನು ಭೇಟಿ ಮಾಡುವಂತೆ ಡಾ.ಸುದರ್ಶನ್ ತಿಳಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತೋಷ್ ತಿಳಿಸಿದ್ದಾರೆ.
ಅದರಂತೆ ಸಂತೋಷ್ ರವರು ದುಬೈಗೆ ತೆರಳಿ ಅಫ್ತಾಬ್ ರವರನ್ನು ಭೇಟಿ ಮಾಡಿದ್ದು , ನಂತರ UK ಯಲ್ಲಿ M.PH ವಿಧ್ಯಾಭ್ಯಾಸಕ್ಕಾಗಿ ಸೀಟಿಗೆ 18 ಲಕ್ಷಕ್ಕೆ ಇಬ್ಬರ ನಡುವೆ ಒಪ್ಪಂದವಾಗಿದ್ದು, ಅಫ್ತಾಬ್ ಸಂತೋಷ್ ರವರಿಗೆ ಕರೆ ಮಾಡಿ M.PH ವಿಧ್ಯಾಭ್ಯಾಸಕ್ಕಾಗಿ ಸೀಟನ್ನು ಖಾಯಂ ಮಾಡಲು ಮೊದಲಿಗೆ 8.5 ಲಕ್ಷವನ್ನು ನೀಡುವಂತೆ ಕೇಳಿದ್ದು, ಸಂತೋಷ್ ರವರು NRA ಖಾತೆಯನ್ನು ಹೊಂದಿರದ ಕಾರಣ ಹಣವನ್ನು ಜಮಾ ಮಾಡಲು ಅಫ್ತಾಬ್ ನು ಆತನಿಗೆ ಪರಿಚಯವಿರುವ 2ನೇ ಆರೋಪಿ ಸುಮನ್ ಎಸ್ ಎಂಬುವವರನ್ನು ಭೇಟಿ ಆಗುವಂತೆ ತಿಳಿಸಿದ್ದು, ಅದರಂತೆ ಸಂತೋಷ್ ರವರು ಉಡುಪಿಗೆ ಆಗಮಿಸಿ ಸುಮನ್ ಎಸ್ ರವರನ್ನು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಎಂಟಿಆರ್ ಹೋಟೆಲ್ ನ ಹತ್ತಿರ ಭೇಟಿಯಾದ ನಂತರ ಆರೋಪಿಗಳನ್ನು ನಂಬಿ ದಿನಾಂಕ 26/12/2024 ರಂದು ಸುಮನ್ ರವರ ಉಡುಪಿಯ ಬನ್ನಂಜೆಯಲ್ಲಿರುವ ಬ್ಯಾಂಕ್ ಆಪ್ ಬರೋಡ ಶಾಖೆಯ ಖಾತೆಗೆ ಬೆಂಗಳೂರಿನಲ್ಲಿರುವ ನಂದಿನಿ ಲೇಔಟ್ ಶಾಖೆ ಆಕ್ಷಿಸ್ ಬ್ಯಾಂಕ್ ನಿಂದ RTGS ಮುಖಾಂತರ 8.5 ಲಕ್ಷ ರೂ ಗಳನ್ನು ವರ್ಗಾವಣೆ ಮಾಡಿದ್ದು, ನಂತರ ಆರೋಪಿಗಳು ಸಂತೋಷ್ ರವರ ಕರೆಯನ್ನು ಸ್ವೀಕರಿಸದೇ ಇದ್ದು, ಆರೋಪಿತರು ಸಂತೋಷ್ ರವರಿಗೆ ಯುಕೆಯಲ್ಲಿ M.PH ವಿಧ್ಯಾಭ್ಯಾಸವನ್ನು ಮಾಡಲು ಸೀಟನ್ನು ಕೊಡಿಸುತ್ತೇವೆ ಎಂದು ನಂಬಿಸಿ , ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸಂತೋಷ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 316(2) 318(2) ಜೊತೆ 3(5) BNS ರಂತೆ ಪ್ರಕರಣ ದಾಖಲಾಗಿದೆ.