Spread the love

ಮಣಿಪಾಲ: ದಿನಾಂಕ 05/01/2025 (ಹಾಯ್ ಉಡುಪಿ ನ್ಯೂಸ್) ಪೆರಂಪಳ್ಳಿ ಯ ಅಪಾರ್ಟ್ಮೆಂಟ್ ಒಂದರಲ್ಲಿ ನಡೆಯುತ್ತಿದ್ದ ವೈಶ್ಯಾವಾಟಿಕೆ ಅಡ್ಡೆಗೆ ಮಣಿಪಾಲ ಪೊಲೀಸ್‌ ಠಾಣೆಯ ಪೊಲೀಸ್ ನಿರೀಕ್ಷಕರಾದ ದೇವರಾಜ್‌ ಟಿ ವಿ ಅವರು ದಾಳಿ ನಡೆಸಿ ನಾಲ್ಕು ಜನರನ್ನು ಬಂಧಿಸಿದ್ದಾರೆ.

ಮಣಿಪಾಲ ಪೊಲೀಸ್‌ ಠಾಣೆ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿವಿ ಅವರು ದಿನಾಂಕ:04-01-2025 ರಂದು ಠಾಣೆಯಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಪೆರಂಪಳ್ಳಿ ಎಂಬಲ್ಲಿ ಇರುವ ಅಪಾರ್ಟ್‌ಮೆಂಟ್‌ ನ ಎರಡನೇ ಮಹಡಿಯಲ್ಲಿನ ಕೊಠಡಿಯಲ್ಲಿ ಅಕ್ರಮ ಲಾಭಕ್ಕಾಗಿ ಬಲವಂತವಾಗಿ ಮಹಿಳೆಯರನ್ನು ಇರಿಸಿಕೊಂಡು ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಗುಪ್ತ ಮಾಹಿತಿ ದಾರರಿಂದ ಖಚಿತ ಮಾಹಿತಿ ಬಂದಿದೆ ಎನ್ನಲಾಗಿದೆ.

ಪೊಲೀಸ್ ನಿರೀಕ್ಷಕರು ಕೂಡಲೇ  ಪೊಲೀಸ್‌ ಅಧೀಕ್ಷಕರ ಅನುಮತಿ ಮೇರೆಗೆ  ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ದಾಳಿ ಮಾಡಿ ಕೊಠಡಿಯಲ್ಲಿ ಇದ್ದ ನೊಂದ ಮಹಿಳೆಯನ್ನು ರಕ್ಷಿಸಿ ಆರೋಪಿಗಳಾದ 1.ರವೀಶ 2.ರಘುನಂದನ ಎಮ್‌ ಡಿ, 3. ಅಮೀನಾ ಬೇಗಂ, 4.ಡಯನಾ ಲೂವಿಸ್ ಇವರುಗಳನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 281,110 BNS RULE 129R/W177 IMVACT ರಂತೆ ಪ್ರಕರಣ ದಾಖಲಾಗಿದೆ.

error: No Copying!