Spread the love

ಉಡುಪಿ: ದಿನಾಂಕ: 04/01/2025 (ಹಾಯ್ ಉಡುಪಿ ನ್ಯೂಸ್) ನಗರದ ಬೀಡಿನಗುಡ್ಡೆ ಪರಿಸರದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ದುಷ್ಟ ನನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ  ಪುನೀತ್‌ ಕುಮಾರ್‌ ಬಿ ಈ ಅವರು ಬಂಧಿಸಿದ್ದಾರೆ.

,ಉಡುಪಿ ನಗರ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಪುನೀತ್ ಕುಮಾರ್ ಬಿ ಈ  ಅವರಿಗೆ ದಿನಾಂಕ : 03-01-2025 ರಂದು ಉಡುಪಿ ತಾಲ್ಲೂಕು ಶಿವಳ್ಳಿ ಗ್ರಾಮದ ಬೀಡಿನ ಗುಡ್ಡೆ ಬಳಿ ವ್ಯಕ್ತಿಯೋರ್ವ ನಿಷೇದಿತ ಮಾದಕ ವಸ್ತು MDMA ಪೌಡರ್ ಮತ್ತು ಚರಸ್ ಅನ್ನು ಮಾರಾಟ ಮಾಡಲು ಹೊಂದಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ 

ಕೂಡಲೇ ಪೊಲೀಸ್ ಅಧೀಕ್ಷಕರ ಅನುಮತಿ ಪಡೆದು  ಸಿಬ್ಬಂದಿಯವರ ಸಹಕಾರದೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ  ದಾಳಿ ನಡೆಸಿದ್ದಾರೆ, ಸ್ಥಳದಲ್ಲಿ ಇದ್ದ ಮಾದಕ ವಸ್ತು ಹೊಂದಿದ್ದ ಆರೋಪಿ ನಾಗರಾಜ ಎಂಬಾತನನ್ನು ಬಂಧಿಸಿ   ಆಪಾದಿತನ ಬಳಿ ಇದ್ದ ಯಾವುದೇ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 49 ಗ್ರಾಂ 46 ಮಿಲಿಗ್ರಾಂ ತೂಕದ MDMA ಅಂದಾಜು ಮೌಲ್ಯ 2,50,000/-ರೂ ಹಾಗೂ 3 ಗ್ರಾಂ 86 ಮಿಲಿಗ್ರಾಂ ತೂಕದ ಚರಸ್ ಅಂದಾಜು ಮೌಲ್ಯ ರೂ. 3,500/- ಆಗಿರುತ್ತದೆ. ಆಪಾದಿತ ಬಳಸಿದ್ದ ಮೊಬೈಲ್ ಪೋನ್-2 ಅಂದಾಜು ಮೌಲ್ಯ ರೂ. 22,000/-, ಖಾಲಿ ಪಾರದರ್ಶಕ ಪ್ಲಾಸ್ಟಿಕ್ ಕವರ್-6, ಮಾದಕ ವಸ್ತು ಮಾರಾಟ ಮಾಡಲು ಬಳಸಿದ KA-51 AB-7901 ಹೋಂಡಾ ಆಕ್ಟೀವ ಸ್ಕೂಟರ್ ಅಂದಾಜು ಮೌಲ್ಯ 50,000/- ಹಾಗೂ ಹೆಲ್ಮೆಟ್-1 ಅಂದಾಜು ಮೌಲ್ಯ 300/-ರೂ ನ್ನು  ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡಿರುವ ಸ್ವತ್ತುಗಳು ಒಟ್ಟು ಅಂದಾಜು ಮೌಲ್ಯ ರೂ. 3,25,800/- ಆಗಿದೆ ಎನ್ನಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: NARCOTIC DRUGS & PSYCHOTROPIC SUBSTANCES ACT, 1985 (U/s-22(b),8(c),20(b) (ii) A)ರಂತೆ ಪ್ರಕರಣ ದಾಖಲಾಗಿದೆ.

error: No Copying!