ಶಂಕರನಾರಾಯಣ: ದಿನಾಂಕ; 03-01-2025) ಹಾಯ್ ಉಡುಪಿ ನ್ಯೂಸ್) ಬೆಳ್ವೆ ಗ್ರಾಮದ ರೆಸಿಡೆನ್ಸಿಯ ರೂಮ್ ಒಂದರಲ್ಲಿ ನಡೆಯುತ್ತಿದ್ದ ಅಂದರ್ ಬಾಹರ್ ಜುಗಾರಿ ಅಡ್ಡೆಗೆ ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ಅವರು ದಾಳಿ ನಡೆಸಿ ಏಳು ಜನರನ್ನು ಬಂಧಿಸಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ನಾಸಿರ್ ಹುಸೇನ್ ಅವರಿಗೆ ದಿನಾಂಕ 02/01/2025 ರಂದು ಮಾಹಿತಿದಾರರೋರ್ವರು ಕರೆ ಮಾಡಿ ಬೆಳ್ವೆ ಗ್ರಾಮದ ವನಜಲ ರೆಸಿಡೆನ್ಸಿ ಕಟ್ಟಡದ ರೂಂ ನಂಬ್ರ 103 ರಲ್ಲಿ ಜುಗಾರಿ ಆಡುತ್ತಿದ್ದಾರೆ ಎಂದು ಖಚಿತ ಮಾಹಿತಿ ನೀಡಿದ ಮೇರೆಗೆ ಕೂಡಲೇ ಠಾಣೆಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ .
ಅಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರೋಪಿತರಾದ 1)ಹರೀಶ್,2) ಪ್ರಕಾಶ್, 3) ಮಂದಾರ, 4) ಸಿದ್ದಾರ್, 5) ನಾಗರಾಜ್, 6) ಮುಖೇಶ್, 7) ಚಿರಾಗ್ ಎಂಬವರನ್ನು ಬಂಧಿಸಿದ್ದಾರೆ.ಇವರು ಬೆಳ್ವೆ ಗ್ರಾಮದ ವನಜಲ ರೆಸಿಡೆನ್ಸಿ ಕಟ್ಟಡದ ರೂಮ್ ನಂಬ್ರ 103 ನೇದರಲ್ಲಿ ಅಕ್ರಮವಾಗಿ ಸಂಘಟಿತರಾಗಿ ಹಣವನ್ನು ಪಣವಾಗಿರಿಸಿ ಅಂದರ್ ಬಾಹರ್ ಎಂಬ ಹೆಸರಿನ ಇಸ್ಪೀಟ್ ಜೂಜಾಟ ಆಟ ಅಡುತ್ತಿರುವುದಾಗಿ ಜುಗಾರಿ ಆಟದ ಬಗ್ಗೆ ಉಪಯೋಗ ಮಾಡಿದ ನಗದು ಹಣ 13,700/- ರೂಪಾಯಿ, 7 ಮೊಬೈಲ್ ಪೋನ್ ಗಳು, ಇಸ್ಪೀಟ್ ಜೂಜಾಟ ಆಡಲು ಬಂದಿದ್ದ ಕಾರು, ಇಸ್ಪೀಟ್ ಎಲೆಗಳು ಹಾಗೂ ಬಟ್ಟೆಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 112 ಬಿ ಎನ್ ಎಸ್ & ಕಲಂ 79, 80 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.