ಪಡುಬಿದ್ರಿ: ದಿನಾಂಕ:01-01-2025(ಹಾಯ್ ಉಡುಪಿ ನ್ಯೂಸ್) ಪಡುಬಿದ್ರಿ ಮಾರ್ಕೇಟ್ ರಸ್ತೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಮೂವರನ್ನು ಪಡುಬಿದ್ರಿ ಠಾಣೆಯ ಪಿಎಸ್ಐ ಪ್ರಸನ್ನ ಎಂ.ಎಸ್ ಅವರು ಬಂಧಿಸಿದ್ದಾರೆ.
ಪಡುಬಿದ್ರಿ ಠಾಣಾ ಪಿಎಸ್‌ಐ (ಕಾ.ಸು & ಸಂಚಾರ) ಪ್ರಸನ್ನ ಎಂ.ಎಸ್ ಅವರು ದಿನಾಂಕ:31-12-2024 ರಂದು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ಠಾಣಾ ಅಪರಾಧ ಪತ್ತೆ ವಿಭಾಗದ ಹೆಚ್.ಸಿ, ಕೃಷ್ಣಪ್ರಸಾದ್ ಅವರು ನೀಡಿದ ಮಾಹಿತಿಯ ಆಧಾರದ ಮೇರೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರೆ ಮಾರ್ಕೇಟ್ ರಸ್ತೆಯ ಬಳಿ ಇರುವ ಮಹಾಕಾಳಿ ತರಕಾರಿ ಅಂಗಡಿಯ ಬಳಿಯ ಪಾಳುಬಿದ್ದ ಗೂಡಂಗಡಿಯ ಒಳಗೆ ಒಟ್ಟುಗೂಡಿ ವ್ಯವಸ್ಥಿತರಾಗಿ ಸಂಘಟಿತರಾಗಿ ತಮ್ಮ ತಮ್ಮ ಸ್ವಂತ ಲಾಭಕ್ಕೋಸ್ಕರ ಹಣವನ್ನು ಪಣವಾಗಿ ಪಡೆದು ಮಟ್ಕಾ ಜುಗಾರಿ ಆಡಿಸುತ್ತಿದ್ದ ಆರೋಪಿಗಳಾದ (1). ಚಂದ್ರ (50) ಹೆಜಮಾಡಿ ಗ್ರಾಮ, ಕಾಪು ತಾಲೂಕು. (2). ಮುರಳೀಧರ (41) ನಡ್ಸಾಲು ಗ್ರಾಮ, ಕಾಪು ತಾಲೂಕು ಎಂಬವರನ್ನು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆದು ಅವರೀರ್ವರು ಮಟ್ಕಾ ಜುಗಾರಿ ಆಟ ಆಡಲು ಬಳಸಿದ ಪುಸ್ತಕ, ಹಾಳೆಗಳು, ಪೆನ್ನು, ನಗದು ರೂ 1835/- (ಒಂದು ಸಾವಿರದ ಎಂಟು ನೂರ ಮೂವತೈದು ಮಾತ್ರ), ಪೋಲ್ಡ್ ಮಾಡುವ ಟೇಬಲ್-1, ಪ್ಲಾಸ್ಟಿಕ್ ಚೇರ್- 2 ಹಾಗೂ ಆರೋಪಿಗಳ ವಶ ಇದ್ದ ಮೊಬೈಲ್-2ಗಳನ್ನು ಸ್ವಾದೀನಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಸೊತ್ತುಗಳ ಸಮೇತ ಠಾಣೆಗೆ ಕರೆತಂದು ವಶಕ್ಕೆ ಪಡೆದ ಆರೋಪಿಗಳಿಬ್ಬರನ್ನು ವಿಚಾರಣೆ ನಡೆಸಿದಾಗ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ಹಣವನ್ನು ಇನ್ನೋರ್ವ ಆರೋಪಿ ಮನೋಜ್ ಎಂಬವ ಪಡೆದುಕೊಳ್ಳುತ್ತಾನೆ ಎಂದಿದ್ದು ಈ ಮೂವರ ಮೇಲೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ78(i)(iii) ಕೆ ಪಿ ಕಾಯಿದೆ.ಮತ್ತು ಕಲಂ: 112 BNS ರಂತೆ ಪ್ರಕರಣ ದಾಖಲಾಗಿದೆ.