ಬೈಂದೂರು: ದಿನಾಂಕ :28-12-2024(ಹಾಯ್ ಉಡುಪಿ ನ್ಯೂಸ್) ನಾಗಸಾಧು ವೊಬ್ಬನು ಪ್ರಸಾದ ನೀಡುವ ನೆಪದಲ್ಲಿ ವಶೀಕರಣ ಮಾಡಿ ಉಂಗುರ ಲಪಟಾಯಿಸಿದ್ದಾನೆ ಎಂದು ಬೈಂದೂರು ನಿವಾಸಿಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ
ಬೈಂದೂರು ನಿವಾಸಿ ಮಂಜುನಾಥ (46) ಎಂಬವರು ದಿನಾಂಕ 14/12/2024 ರಂದು ಬೆಳಿಗ್ಗೆ ಅಂಗಡಿಯಲ್ಲಿರುವಾಗ ಕಪ್ಪು ಬಣ್ಣದ ಬಟ್ಟೆ ಧರಿಸಿರುವ ನಾಗ ಸಾಧು ಬಂದು ಪ್ರಸಾದ ನೀಡಿ ಮಂಜುನಾಥರವರ 1 ಪವನ್ ನವರತ್ನ ಹರಳಿನ ಚಿನ್ನದ ಉಂಗುರವನ್ನು ಪ್ರಸಾದದಲ್ಲಿ ಹಾಕಿ ಅಂಗಡಿ ಡ್ರಾವರ್ ನಲ್ಲಿ ಇಡುವಂತೆ ಹೇಳಿ ಪೂಜೆ ಮಾಡಿ ಮತ್ತೆ ಉಂಗುರ ಹಾಕಿಕೊಳ್ಳುವಂತೆ ಹೇಳಿ ಹೋಗಿದ್ದನು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನಾಗ ಸಾಧು ಹೋದ ನಂತರ ಮಂಜುನಾಥ ರವರು ಪ್ರಸಾದವನ್ನು ತೆಗೆದು ನೋಡಿದಾಗ ಉಂಗುರ ಕಾಣಿಸದೇ ಇದ್ದು ನಾಗ ಸಾಧು ಮಂಜುನಾಥ ರವರನ್ನು ವಶೀಕರಣ ಮಾಡುವ ರೀತಿಯಲ್ಲಿ ನಂಬಿಸಿ ಉಂಗುರವನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಜುನಾಥರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ 318 (2),318 (4) BNS ರಂತೆ ಪ್ರಕರಣ ದಾಖಲಾಗಿದೆ.