
- ಕೋಟ: ದಿನಾಂಕ:26-12-2024( ಹಾಯ್ ಉಡುಪಿ ನ್ಯೂಸ್) ಕೊಮೆ ಬೀಚ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಅಮಲಿನಲ್ಲಿದ್ದ ಮೂವರು ಯುವಕರನ್ನು ಕೋಟ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ರಾಘವೇಂದ್ರ ಸಿ. ಅವರು ಬಂಧಿಸಿದ್ದಾರೆ.
- ಕೋಟ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ರಾಘವೇಂದ್ರ ಸಿ ರವರು ದಿನಾಂಕ 25/12/2024 ರಂದು ಬೆಳಿಗ್ಗೆ ಠಾಣಾ ರೌಂಡ್ಸ್ ಕರ್ತವ್ಯದಲ್ಲಿರುವಾಗ ತೆಕ್ಕಟ್ಟೆ ಗ್ರಾಮದ ಕೊಮೆ ಬೀಚ್ ಬಳಿ ಮೂವರು ಯುವಕರು ಅಮಲು ಪದಾರ್ಥ ಸೇವಿಸಿರುವ ಅನುಮಾನ ಇರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ ಕೂಡಲೇ ಪಿಎಸ್ಐಯವರು ಸ್ಥಳಕ್ಕೆ ಹೋದಾಗ ಅಲ್ಲಿ ಮೂವರು ಯುವಕರು ಅಮಲಿನಲ್ಲಿರುವುದು ಕಂಡು ಬಂದಿದೆ ಎನ್ನಲಾಗಿದೆ.
- ಅವರ ಬಳಿ ಹೋಗಿ ಪೊಲೀಸರು ಅವರ ಹೆಸರು ಕೇಳಿದಾಗ ವಿಘ್ನೇಶ್ (22) ಕುಂಭಾಶಿ, ಕಾರ್ತಿಕ್ (22),ಬೀಜಾಡಿ, ನವನೀತ (19) ಬೀಜಾಡಿ ಗ್ರಾಮ ಎಂದು ತಿಳಿಸಿದ್ದು, ಅವರನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವರು ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಅವರನ್ನು ಸ್ಥಳದಲ್ಲಿಯೇ ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
- ಈ ಮೂವರು ಯುವಕರನ್ನು ವೈದ್ಯಕೀಯ ತಪಾಸಣೆಗಾಗಿ ವೈದ್ಯಾಧಿಕಾರಿಯವರು ಸಮುದಾಯ ಆರೋಗ್ಯ ಕೇಂದ್ರ, ಕೋಟರವರ ಮುಂದೆ ಹಾಜರು ಪಡಿಸಿದ್ದು ಈ ಮೂವರು ಯುವಕರನ್ನು ಪರೀಕ್ಷಿಸಿದ ವೈದ್ಯರು ಅವರೆಲ್ಲರೂ ಗಾಂಜಾ ಸೇವಿಸಿರುವ ಬಗ್ಗೆ ದೃಢಪಡಿಸಿ ವರದಿ ನೀಡಿರುತ್ತಾರೆ ಎನ್ನಲಾಗಿದೆ.
- ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 27(B) NDPS ACT ರಂತೆ ಪ್ರಕರಣ ದಾಖಲಾಗಿದೆ.