ಕುಂದಾಪುರ: ದಿನಾಂಕ:25-12-2024(ಹಾಯ್ ಉಡುಪಿ ನ್ಯೂಸ್) ಭಾರತೀಯ ಸೇನೆಯ ಮರಾಠ ರೆಜಿಮೆಂಟಿನಲ್ಲಿ ಕಳೆದ ಹದಿಮೂರು ವರ್ಷಗಳಿಂದ ಸೈನಿಕನಾಗಿ ಸೇವೆಸಲ್ಲಿಸುತ್ತಿದ್ದ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ನಿವಾಸಿ ಅನೂಪ್ ಪೂಜಾರಿಯವರು ನಿನ್ನೆ ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಪೂಂಚ್ ಪ್ರದೇಶದಲ್ಲಿರುವ 150 ಅಡಿ ಆಳದ ಕಂದಕಕ್ಕೆ ಅವರು ಸಾಗುತ್ತಿದ್ದ ಸೇನೆಯ ವಾಹನ ಉರುಳಿ ಬಿದ್ದಿದ್ದು ಈ ಅಪಘಾತದಲ್ಲಿ ಸೇನೆಯ ಐವರು ಸೈನಿಕರು ಹುತಾತ್ಮರಾಗಿದ್ದು ಅವರಲ್ಲಿ ಉಡುಪಿ ಜಿಲ್ಲೆಯ ಅನೂಪ್ ಪೂಜಾರಿ ಕೂಡ ಹುತಾತ್ಮ ರಾಗಿದ್ದಾರೆ.
ಭಾರತಮಾತೆಯ ಸೇವೆಗೆ ತೆರಳಿ ಇದೀಗ ಹುತಾತ್ಮ ರಾಗಿರುವ ಯೋಧ ಅನೂಪ್ ಪೂಜಾರಿಯ ಸಾವಿಗೆ ಇಡೀ ಜಿಲ್ಲೆಯ ಜನತೆ ದುಃಖ ದಿಂದ ಅಗಲಿದ ಯೋಧನಿಗೆ ಸಂತಾಪ ಸೂಚಿಸುತ್ತಿದ್ದಾರೆ.