
ಹಿರಿಯಡ್ಕ: ದಿನಾಂಕ:24-12-2024(ಹಾಯ್ ಉಡುಪಿ ನ್ಯೂಸ್) ಆತ್ರಾಡಿ ಗ್ರಾಮದ ಮನೆಯೊಂದರ ಬಳಿ ನಡೆಯುತ್ತಿದ್ದ ಇಸ್ಪೀಟ್ ಜುಗಾರಿ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಹಿರಿಯಡ್ಕ ಪೊಲೀಸ್ ಠಾಣೆ ಪಿಎಸ್ಐ ಯವರಾದ ಮಂಜುನಾಥ ಅವರು ದಿನಾಂಕ: 22/12/2024 ರಂದು ರಾತ್ರಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಾಹಿತಿದಾರರ ಮಾಹಿತಿಯಂತೆ ಆತ್ರಾಡಿ ಗ್ರಾಮದ ಅನ್ವರ್ ಎಂಬವರ ಮನೆಯ ಬಳಿ ಸಾವರ್ಜನಿಕ ಸ್ಥಳದಲ್ಲಿ ಆರೋಪಿಗಳು ತಮ್ಮ ಸ್ವಂತ ಲಾಭಕ್ಕೋಸ್ಕರ ಇಸ್ಪಿಟ್ ಜುಗಾರಿ ಆಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದಾಗ ಆರೋಪಿಗಳೆಲ್ಲರೂ ತಪ್ಪಿಸಿ ಓಡಿಹೋಗಿದ್ದಾರೆ ಎನ್ನಲಾಗಿದೆ.
ಪೊಲೀಸರು ನಂತರ ಅಂದರ್ ಬಾಹರ್ ಆಟಕ್ಕೆ ಉಪಯೋಗಿಸಿದ ಟಾರ್ಪಲ್ , ಇಸ್ಪಿಟ್ ಎಲೆಗಳು, ಹಾಗೂ 4 ದ್ವಿಚಕ್ರ ವಾಹನಗಳು ಹಾಗೂ ಒಂದು ಆಟೋರಿಕ್ಷಾ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ .
ಆರೋಪಿಗಳು ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪಿಟ್ ಜುಗಾರಿ ಆಟವನ್ನು ಸಾರ್ವಜನಿಕ ಸ್ಥಳದಲ್ಲಿ ಆಡಿ ಅಪರಾಧ ಕೃತ್ಯವನ್ನು ಎಸಗಿರುತ್ತಾರೆ ಎಂದು ದೂರಲಾಗಿದೆ .
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ U/S: 78(i)(iii)KP ACT & 112 BNS ರಂತೆ ಪ್ರಕರಣ ದಾಖಲಾಗಿದೆ.