Spread the love

ಬ್ರಹ್ಮಾವರ: ದಿನಾಂಕ: 22-12-2024 (ಹಾಯ್ ಉಡುಪಿ ನ್ಯೂಸ್) ಕೊಕ್ಕರ್ಣೆ ಹೂವಿನ ಮಾರ್ಕೆಟ್ ಬಳಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಉಡುಪಿ ನಗರ ಪೊಲೀಸ್ ಠಾಣೆಯ  ಪೊಲೀಸ್‌ ಉಪನಿರೀಕ್ಷಕರಾದ ಪುನೀತ್ ಕುಮಾರ್ ಬಿ ಈ ಅವರು ಬಂಧಿಸಿದ್ದಾರೆ.

ಉಡುಪಿ ನಗರ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಪುನೀತ್ ಕುಮಾರ್ ಬಿ ಈ ಅವರು ದಿನಾಂಕ :21-12-2024 ರಂದು ಬ್ರಹ್ಮಾವರ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಕ್ಕರ್ಣೆ ಎಂಬಲ್ಲಿ ಸಿಬ್ಬಂದಿಯವರೊಂದಿಗೆ ಉಡುಪಿ ನಗರ ಠಾಣೆಯ ಪ್ರಕರಣವೊಂದರಲ್ಲಿ ವಿಶೇಷ ಕರ್ತವ್ಯದಲ್ಲಿರುವಾಗ ಕೊಕ್ಕರ್ಣೆಯಲ್ಲಿ ಮಟ್ಕಾ ಜುಗಾರಿ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ  ಕೊಕ್ಕರ್ಣೆಯ ಪುತ್ತನ್ ಕಟ್ಟೆಯ ಹೂವಿನ ಮಾರ್ಕೆಟ್‌ ಬಳಿ ಬಂದು ನೋಡಿದಾಗ ಅಲ್ಲಿ 3-4 ಜನ ಸೇರಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪುನೀತ್ ಕುಮಾರ್ ಅವರು ಅವರ ಬಳಿ ಹೋದಾಗ ಸಾರ್ವಜನಿಕರು ಓಡಿ ಹೋಗಿದ್ದು ಅಲ್ಲಿ ನಿಂತಿದ್ದ ಓರ್ವ ವ್ಯಕ್ತಿಯನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿ ಆತನ ಕೈಯಲ್ಲಿದ್ದ ಚೀಟಿಯ ಬಗ್ಗೆ ಕೇಳಿದಾಗ ಮಟ್ಕಾ ಜುಗಾರಿ ಬರೆದ ಚೀಟಿ ಎಂಬುದಾಗಿ ತಿಳಿಸಿದ್ದು ಮಟ್ಕಾ ಜುಗಾರಿ ಆಟದಲ್ಲಿ ಬಂದ ಹಣವನ್ನು ಸಂತೆಕಟ್ಟೆಯ ಚಂದ್ರಶೇಖರ ಎಂಬಾತನಿಗೆ ಕೊಡುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಆರೋಪಿತ ಸಂಜೀವ (67) ಕೊಕ್ಕರ್ಣೆ ಅಂಚೆ, ಎಂಬಾತನಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು 1060/- ರೂ ಮಟ್ಕಾ ಅಂಕಿಗಳನ್ನು ಬರೆದ ಚೀಟಿ -1, ಬಾಲ್‌ ಪೆನ್‌ – ಮೊಬೈಲ್‌ ಪೋನ್‌ -1 ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 112 BNS And US 78 (i) (iii) KP Act BNS ರಂತೆ ಪ್ರಕರಣ ದಾಖಲಾಗಿದೆ.

error: No Copying!