ಕುಂದಾಪುರ: ದಿನಾಂಕ 16/12/2024 (ಹಾಯ್ ಉಡುಪಿ ನ್ಯೂಸ್) ಮೂಡಹಿತ್ಲು ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಡುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಎನ್.ನಂಝಪ್ಪ ಅವರು ಬಂಧಿಸಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಎನ್.ನಂಜಪ್ಪ ಅವರಿಗೆ ದಿನಾಂಕ: 15-12-2024ರಂದು ಕೋಣಿ ಗ್ರಾಮದ ಹುಣ್ಸೆಕಟ್ಟೆ ಮೂಡಹಿತ್ಲು ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ನಡೆಸುತ್ತಿರುವುದಾಗಿ ಬಂದ ಸಾರ್ವಜನಿಕ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿದ್ದಾರೆ .
ದಾಳಿ ನಡೆಸಿದಾಗ ಅಲ್ಲಿ 1. ನಿತೀನ್, 2.ಚಂದನ್ ಎಂಬವರನ್ನು ಪೊಲೀಸ್ ಸಿಬ್ಬಂದಿಯವರ ಸಹಾಯದಿಂದ ಹಿಡಿದಿದ್ದು, ಉಳಿದ ಆರೋಪಿ 3. ರವಿ ಮತ್ತು ಇತರ 4 ಜನ ಓಡಿ ಹೋಗಿರುತ್ತಾರೆ. ಜುಗಾರಿ ಆಟಕ್ಕೆ ಬಳಸಿದ ಹಣವನ್ನು ಸ್ಥಳದಲ್ಲಿಯೇ ಬೀಸಾಕಿದ್ದ ನಗದು ರೂಪಾಯಿ 1,100/- ಇತ್ತು ಎನ್ನಲಾಗಿದೆ.
ಅವರು ಹಿಂಸಾತ್ಮಕವಾಗಿ ಜುಗಾರಿ ಆಟಕ್ಕೆ ಬಳಸಿದ 2 ಕೋಳಿ ಹುಂಜ, ಕೋಳಿಯ ಕಾಲಿಗೆ ಕಟ್ಟಿದ ಬಾಳಾ ಸ್ಥಳದಲ್ಲಿದ್ದ ಮೋಟಾರು ಸೈಕಲ್ ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 121/2024 ಕಲಂ: 112 BNS ಕಲಂ:87, 93 KP Act ಮತ್ತು 11(1)(a) ಪ್ರಾಣಿ ಹಿಂಸೆ ತಡೆ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.