- ಕುಂದಾಪುರ: ದಿನಾಂಕ 06/12/2024(ಹಾಯ್ ಉಡುಪಿ ನ್ಯೂಸ್) ಕೊಡಿಗೆ ಬಸ್ ನಿಲ್ದಾಣದ ರಸ್ತೆಯಲ್ಲಿ ಆಟೋರಿಕ್ಷಾದಲ್ಲಿ ಬಂದು ದನ ಕಳ್ಳತನ ನಡೆಸಲು ಪ್ರಯತ್ನಿಸುತ್ತಿದ್ದ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
- ಕುಂದಾಪುರ,ಕೊಡ್ಲಾಡಿ ನಿವಾಸಿ ಗುರುರಾಜ (24) ಎಂಬವರು ದಿನಾಂಕ :05-12-2024 ರಂದು ಸಂಜೆ ಕೆಲಸ ಮುಗಿಸಿ ಮೋಟಾರು ಸೈಕಲ್ ನಲ್ಲಿ ಮನೆಗೆ ಹೋಗುತ್ತಿರುವಾಗ ಕರ್ಕುಂಜೆ ಗ್ರಾಮದ ಕೊಡಿಗೆ ಬಸ್ಸು ನಿಲ್ದಾಣದ ರಸ್ತೆಯ ಬದಿಯಲ್ಲಿ ಆಟೋರಿಕ್ಷಾ ನಂಬ್ರ KA-20B-9334 ನಿಂತಿದ್ದು ಇಬ್ಬರು ಗಂಡಸರು ರಸ್ತೆ ಬದಿ ಮೇಯುತ್ತಿದ್ದ ಒಂದು ಬೀಡಾಡಿ ದನವನ್ನು ಹಿಡಿದು ಆಟೋರಿಕ್ಷಾದ ಒಳಗೆ ತುಂಬಿಸಲು ಪ್ರಯತ್ನ ಮಾಡುತ್ತಿದ್ದು, ಆ ಸಮಯ ಗುರುರಾಜರವರು ಮೋಟಾರು ಸೈಕಲ್ ಅನ್ನು ನಿಲ್ಲಿಸಿದಾಗ ಒಬ್ಬ ವ್ಯಕ್ತಿ ಅಲ್ಲಿಂದ ಓಡಿ ಹೋಗಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಇನ್ನೊಬ್ಬ ವ್ಯಕ್ತಿ ಆಟೋರಿಕ್ಷಾ ಹತ್ತಿ ಹೋಗಲು ಯತ್ನಿಸುತ್ತಿರುವಾಗ ರಸ್ತೆಯಲ್ಲಿ ಹೋಗುವ ವಾಹನದವರು ಬಂದಿದ್ದು ಆತನು ಜನರನ್ನು ನೋಡಿ ಆಟೋರಿಕ್ಷಾದಲ್ಲಿ ಕುಳಿತುಕೊಂಡನು ಜನರು ಸೇರಿ ಕೇಳಿದಾಗ ಆತನ ಹೆಸರು ಇಮ್ರಾನ್ ಹಾಗೂ ಓಡಿ ಹೋದವನ ಹೆಸರು ಸಿನಾನ್ ಎಂಬುದಾಗಿ ತಿಳಿಸಿದ್ದು ಆರೋಪಿಗಳಿಬ್ಬರು ಸೇರಿ ರಸ್ತೆ ಬದಿಯಲ್ಲಿ ಬಿಡಾಡಿ ದನಗಳನ್ನು ಕಳವು ಮಾಡಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದರು ಎಂದು ಗುರುರಾಜ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
- ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 303(2), 62 BNS ರಂತೆ ಪ್ರಕರಣ ದಾಖಲಾಗಿದೆ.