Spread the love

ಬೈಂದೂರು: ದಿನಾಂಕ: 03-12-2024(ಹಾಯ್ ಉಡುಪಿ ನ್ಯೂಸ್) ಕುಡಿತದ ಮತ್ತಿನಲ್ಲಿ ದಿನಾಲೂ ಗಲಾಟೆ ಮಾಡುತ್ತಿದ್ದ ಭಾವ ಕತ್ತಿಯಿಂದ ಕಡಿದಿದ್ದಾನೆ ಎಂದು ರಾಜೀವ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಬೈಂದೂರು,ನಂದನವನ ಗ್ರಾಮ ನಿವಾಸಿ ರಾಜೀವ್ (37) ಎಂಬವರು ತನ್ನ ತಾಯಿ ಮತ್ತು ಅಕ್ಕ ಶಾರದಾ ಮತ್ತು ಭಾವ ನೊಂದಿಗೆ ವಾಸವಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ರಾಜೀವ್ ಅವರ ಭಾವನಾದ ಆರೋಪಿ ಅನಂದ ಎಂಬವನು ಪ್ರತಿನಿತ್ಯ ಮನೆಗೆ ಕುಡಿದು ಬಂದು ಹೆಂಡತಿಯಲ್ಲಿ ಗಲಾಟೆ ಮಾಡಿಕೊಂಡಿದ್ದವನು ದಿನಾಂಕ 02.12.2024 ರಂದು ರಾತ್ರಿ  ತನ್ನ ಹೆಂಡತಿ ಶಾರದಾಳಿಗೆ ಹೊಡೆಯುತ್ತಿದ್ದಾಗ ರಾಜೀವ್ ರವರು ಹೊಡೆಯದಂತೆ ತಡೆದಿದ್ದು ಇದಕ್ಕೆ ಕೋಪಗೊಂಡಿದ್ದ ಆರೋಪಿ  ಆನಂದ ರಾಜೀವ್ ರವನ್ನು ಉದ್ದೇಶಿಸಿ ನನ್ನ ವಿಚಾರಕ್ಕೆ ಬಂದರೆ ಕೊಂದು ಬಿಡುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದವನು ನಂತರ ಕತ್ತಿಯನ್ನು ಹಿಡಿದುಕೊಂಡು ಹಿಂದಿನಿಂದ ಬಂದು ರಾಜೀವ್ ರವರ ಬಲಕೈ ಕೋಲು ಕೈಬಳಿ ಕಡಿದು ಗಾಯಗೊಳಿಸಿ ದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ರಾಜೀವ್ ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ 35̧2 351 (2) 118 (1) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!