Spread the love

ಕಾರ್ಕಳ: ದಿನಾಂಕ: 03/12/2024 (ಹಾಯ್ ಉಡುಪಿ ನ್ಯೂಸ್) ವಿಳಾಸ ಕೇಳುವ ನೆಪದಲ್ಲಿ ಮೋಟಾರ್ ಸೈಕಲ್ ನಲ್ಲಿ ಬಂದ ವ್ಯಕ್ತಿ ಕೊರಳಿನಲ್ಲಿದ್ದ ಚಿನ್ನದ ಚೈನನ್ನು ಎಳೆದು ಕೊಂಡು ಹೋಗಿದ್ದಾನೆ ಎಂದು   ಗೋಪಿ (66) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ನಿವಾಸಿ ಗೋಪಿ (66) ಎಂಬವರು ದಿನಾಂಕ:02-12-2024 ರಂದು ಮನೆಯಿಂದ ಕಾಂತೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿ, ವಾಪಾಸು ಕಾಂತಾವರ ಗ್ರಾಮದ ಅಂಬರೀಶ ಗುಹೆ ಸಮೀಪ ಹಾದು ಹೋಗುವ ಬಾರಾಡಿ-ಕಾಂತವರಕ್ಕೆ ಹೋಗುವ ರಸ್ತೆಯಲ್ಲಿ ಬೆಳಿಗ್ಗೆ ಒಬ್ಬರೇ ಮನೆಗೆ ಹೋಗಲು ನಡೆದುಕೊಂಡು ಹೋಗುತ್ತಿದ್ದಾಗ, ಬಾರಾಡಿ ಕಡೆಯಿಂದ ಓರ್ವನು ಮೋಟಾರು ಸೈಕಲ್ ಸವಾರನು ಮೋಟಾರ್ ಸೈಕಲ್‌ನಲ್ಲಿ ಗೋಪಿರವರ ಸಮೀಪ ಬಂದು ನಿಲ್ಲಿಸಿ ತುಳು ಭಾಷೆಯಲ್ಲಿ ‘ಕೊಚ್ಚಿ ಪೊರ್ಬುಲ್‌ನ ಇಲ್ಲ್ ವೋಲು” ಎಂದು ಕೇಳಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಿಳಾಸ ಕೇಳುವ ನೆಪದಲ್ಲಿ ಗೋಪಿ ರವರನ್ನು ಹಿಡಿದು ನಿಲ್ಲಿಸಿ, ಗಾಯಗೊಳಿಸಿ ಗೋಪಿರವರು ಧರಿಸಿದ್ದ ಚಿನ್ನದ ಚೈನನ್ನು ಎಳೆದುಕೊಂಡು ಹೋಗಿರುತ್ತಾನೆ ಎಂದು ದೂರಿದ್ದಾರೆ. ಗೋಪಿರವರು ಚೈನನ್ನು ಹಿಡಿದುಕೊಂಡಾಗ ಚೈನ್ ನ ಒಂದು ತುಂಡು ಗೋಪಿರವರ ಕೈಯಲ್ಲಿ ಉಳಿದಿದೆ ಎಂದಿದ್ದಾರೆ. ಅಪರಿಚಿತ ವ್ಯಕ್ತಿಯು ಎಳೆದುಕೊಂಡು ಹೋದ ಚಿನ್ನದ ಮೌಲ್ಯ 1,20,000/- ರೂಪಾಯಿ ಆಗಬಹುದು ಎಂದು ದೂರಿದ್ದಾರೆ.

ಆಪಾದಿತ ಕಳ್ಳನು ಚಿನ್ನದ ಚೈನನ್ನು ಬಲವಂತವಾಗಿ ಎಳೆದುಕೊಂಡು ಹೋಗುವ ಕೈಗಳಿಂದ ಬಲವಾಗಿ ತಳ್ಳಿದ ಪರಿಣಾಮ ಗೋಪಿರವರ ಎಡಕೈಗೆ, ಕುತ್ತಿಗೆಗೆ, ತೋಳಿಗೆ ನೋವು ಮತ್ತು ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ: 309 (4), 126, ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದೆ.

error: No Copying!