ಸವದತ್ತಿ : ದಿನಾಂಕ :02-12-2024(ಹಾಯ್ ಉಡುಪಿ ನ್ಯೂಸ್) ನನ್ನ ಈ ರಾಜಕೀಯ ರಂಗದಲ್ಲಿ ಈ ಸ್ಥಾನಕ್ಕೆ ,ಈ ಪದವಿಗೆ ನಿಮ್ಮ ಸಹಕಾರ ಮತ್ತು ನೀವೆ ಕಾರಣ, ನಿಮ್ಮ ಸಂಪೂರ್ಣ ಸಹಕಾರದಿಂದ ನಾನು ಈಗ ಈ ಪದವಿಯಲ್ಲಿ ಇದ್ದೇನೆ. ನಾನು ಯಾವಾಗಲೂ ನಿಮ್ಮೊಂದಿಗೆ ಸದಾ ಇದ್ದೇನೆ. ನಿಮ್ಮ ಬೇಡಿಕೆಗಳ ಬಗ್ಗೆ ಮಾನ್ಯ ಮುಖ್ಯ ಮಂತ್ರಿಗಳೊಂದಿಗೆ ಈ ಚಳಿಗಾಲ ಅಧಿವೇಶನದಲ್ಲಿ ನಾನು ಖುದ್ದಾಗಿ ಮಾತನಾಡುತ್ತೇನೆ, ಎಂದು ಸವದತ್ತಿ ಮತಕ್ಷೇತ್ರದ ಜನಪ್ರಿಯ ಶಾಸಕ ಶ್ರೀ ವಿಶ್ವಾಸ ವಸಂತ ವೈಧ್ಯ ಅವರು ನಗರದ ವ್ಹಿ,ಆರ್ ಕಾದರಗಿ ಸಭಾ ಭವನದಲ್ಲಿ ನಡೆದ ಕರ್ನಾಟಕ ಪತ್ರಕರ್ತರ / ಬೆಂಗಳೂರು, ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಸವದತ್ತಿ ತಾಲೂಕು ಘಟಕದ ಸಹಯೋಗದಲ್ಲಿ ನಡೆದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಟ್ರಸ್ಟಿಗಳ ಸಭೆ ಉದ್ಘಾಟಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ರಾಜ್ಯ ಉಪಾಧ್ಯಕ್ಷ ಶ್ರೀ ಸುದೇಶಕುಮಾರ್ ಅವರು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ಸಂಘದ ವಿಸ್ತೀರ್ಣ, ಸಂಘದಿಂದ ವಿಮಾ ಸೌಲಭ್ಯ, ಇತರೆ ಮಾಹಿತಿ, ಪ್ರಸ್ತಾಪವನ್ನು ಮಂಡಿಸಿದರು. ರಾಜ್ಯ ಅಧ್ಯಕ್ಷರಾದ ಶ್ರೀ ಮುರುಗೇಶ್ ಶಿವಪೂಜಿ ಅವರು ಮಾತನಾಡಿ ನಮ್ಮ ಸಂಘಟನೆ ಭಾರತದ ೨೨ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ ಭಾರತದ ಹರಿಯಾಣ ರಾಜ್ಯ ನಂಬರ್ ೧ ಸಂಘಟನೆ ಮಾಡಿ ಅಲ್ಲಿನ ಸರಕಾರದ ಎಲ್ಲಾ ಸೌಲಭ್ಯಗಳನ್ನು ಪಡೆದಿದೆ,
ವಾರ ಪತ್ರಿಕೆ,ಮಾಸ ಪತ್ರಿಕೆ,ಮಾಧ್ಯಮ ಪಟ್ಟಿಯಿಂದ ಹೊರ ಇರುವ ಅನೇಕ ಹಿರಿಯ ಪತ್ರಿಕೆ ಸಂಪಾದಕರು ೬೦ ವರ್ಷ ಮೇಲ್ಪಟ್ಟ ಹಿರಿಯ ಸಂಪಾದಕರು ಪ್ರತಿ ತಿಂಗಳು ೧೦,೦೦೦, ಸಾವಿರ ಮಾಶಾಸನ ಪಡೆಯುತ್ತಿದ್ದಾರೆ , ಅಲ್ಲಿನ ಕಾನೂನು ರಾಜ್ಯದಲ್ಲಿ ಕೂಡ ಜಾರಿಗೆ ಬಂದು ಇದರ ಅನೂಕುಲ ಎಲ್ಲರಿಗೂ ಲಭಿಸಲಿ ಎಂದು ಶಾಸಕರಿಗೆ ಸಲಹೆ ನೀಡಿದರು.
ಸಮಾರಂಭದಲ್ಲಿ ಜನಪ್ರಿಯ ಶಾಸಕ ಶ್ರೀ ವಿಶ್ವಾಸ ವಸಂತ ವೈಧ್ಯ ,ರಾಜ್ಯ ಅಧ್ಯಕ್ಷ ಶ್ರೀ ಮುರುಗೇಶ್ ಶಿವಪೂಜಿ ರಾಜ್ಯ ಉಪಾಧ್ಯಕ್ಷ ಶ್ರೀ ಸುಧೇಶಕುಮಾರ್, ಹಾಗೂ ಅಥಿತಿಗಳಾಗಿ ಶ್ರೀ ರಾಜಶೇಖರ ವಿ ಕಾರದಗಿ,ಶ್ರೀ ಸುಧೀರ ದೊಡಮನಿ, ಶ್ರೀ ಬಸವರಾಜ ಪುಟ್ಟಿ, ಹಾಗೂ ಶ್ರೀ ಬಸವರಾಜ್ ಕಪ್ಪನವರ ಶ್ರೀ ಆರ್,ಎಂ, ನೀಡವಾಣಿ, ಹಾಗೂ ಸುಮಾರು ೧೪ ಜಿಲ್ಲಾ ಅಧ್ಯಕ್ಷರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ನಡೆದ ಟ್ರಸ್ಟಿಗಳ ಸಭೆಯಲ್ಲಿ ರಾಷ್ಟ್ರೀಯ ಅಧ್ಯಯನ ಪ್ರವಾಸ ಶಿಬಿರ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಗೋವಾ ರಾಜ್ಯದಲ್ಲಿ ಮುಂದಿನ ತಿಂಗಳು ಜನೆವರಿ ೨೦ ರಿಂದ ೨೮ ರ ಒಳಗೆ ಕಾರ್ಯಕ್ರಮ ನಡೆಸುವ ನಿರ್ಣಯ ಕೈಗೊಳ್ಳುವ ಮೂಲಕ ಅಲ್ಲಿನ ಅಜೆಂಡಾ ಹಾಗೂ ಪೂರ್ವ ಸಿದ್ದತೆ ಬಗ್ಗೆ ಚರ್ಚಿಸಲಾಯಿತು.
ಮತ್ತು ಇಂತಹ ರಾಜ್ಯ ಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಕಾರ್ಯಕಾರಿಣಿ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ವಿವಿಧ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಸಾಧಕರಿಗೆ ನಗದು ಸಹಿತ ರಾಜ್ಗ ಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಹತ್ತು ಜನ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಲು ತೀರ್ಮಾನಿಸಲಾಯಿತು. ಈ ಟ್ರಸ್ಟಿಗೆ ನೂತನವಾಗಿ ಗದಗ ಜಿಲ್ಲೆಯ ಪತ್ರಿಕೆ ವಿತರಕರ ಸಂಘದ ರಾಜ್ಯ ಅಧ್ಯಕ್ಷ ಶಂಕರ ಕುದರಿ ಅವರನ್ನು ಸೆರ್ಪಡೆ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಯಶಸ್ವಿಯಾಗಿ ಸಭೆ ಮುಗಿದ ನಂತರ ಸುಕ್ಷೇತ್ರ ಸವದತ್ತಿ ಯಲ್ಲಮ್ಮನ ಕೊಳ್ಳಕ್ಕೆ ಬೇಟಿ ನೀಡಿ ತಾಯಿ ಆರ್ಶಿವಾದ ಪಡೆದು ಸಭೆ ವಿಸರ್ಜನೆ ಮಾಡಲಾಯಿತು.