ಮಲ್ಪೆ: ದಿನಾಂಕ 30/11/2024 (ಹಾಯ್ ಉಡುಪಿ ನ್ಯೂಸ್) ಕನ್ನರಪಾಡಿ ಆದರ್ಶ ನಗರ ರಸ್ತೆಯಲ್ಲಿ ಟಿಪ್ಪರ್ ಲಾರಿಯಲ್ಲಿ ಮರಳು ಕಳ್ಳ ಸಾಗಾಣಿಕೆ ನಡೆಸುತ್ತಿದ್ದ ಟಿಪ್ಪರ್ ಚಾಲಕನನ್ನು ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಲೋಹಿತ್ ಕುಮಾರ್ ಸಿಎಸ್ ಅವರು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣೆ ,ಪೊಲೀಸ್ ಉಪನಿರೀಕ್ಷಕರಾದ ಲೋಹಿತ್ ಕುಮಾರ್ ಸಿ ಎಸ್ ಅವರು ದಿನಾಂಕ: 29-11-2024 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಕಡೆಕಾರು ಗ್ರಾಮದ ಕನ್ನರಪಾಡಿ ಆದರ್ಶ ನಗರ ಎಂಬಲ್ಲಿ KA-17-B-9894 ನೇ ಟಿಪ್ಪರ್ ಚಾಲಕ/ಮಾಲಕ ಇಮ್ರಾನ್ ಫೈಜಲ್ ಎಂಬಾತನು 3 ಯುನಿಟ್ ನಷ್ಟು ಮರಳನ್ನು ಒಬ್ಬಂಟಿಯಾಗಿಯೋ ಅಥವಾ ಸಂಘಟಿತವಾಗಿಯೋ ಯಾವುದೋ ಸ್ಥಳದಿಂದ ಕಳವು ಮಾಡಿಕೊಂಡು ಬಂದು, ಯಾವುದೋ ಸ್ಥಳಕ್ಕೆ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಗಮನಿಸಿ ಆತನನ್ನು ಬಂಧಿಸಿ ಟಿಪ್ಪರ್ ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:303(2),112BNS AND 4,4A,21 MMRD ACT ರಂತೆ ಪ್ರಕರಣ ದಾಖಲಾಗಿದೆ.