ಕುಂದಾಪುರ: ದಿನಾಂಕ:30-11-2024(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ ಎಂದು ಕಸಬಾ ಗ್ರಾಮದ ಮಹಿಳೆ ಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ ಕಸಬಾ ಗ್ರಾಮದ ನಿವಾಸಿ ಅನುಷಾ (30) ಎಂಬವರು ಕಿರಣ ಕುಮಾರ್ ಎಂಬವರೊಂದಿಗೆ ದಿನಾಂಕ 02/05/2018 ರಂದು ಮದುವೆ ಆಗಿದ್ದು ಮದುವೆ ನಂತರ ಆರೋಪಿ ಕಿರಣ ಕುಮಾರ್ ನ ಮನೆಯಾದ ಉಡುಪಿ ನೇಜಾರಿ ಗೆ ಅನುಷಾರನ್ನು ಕರೆದುಕೊಂಡು ಹೋಗಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಸ್ಪಲ್ಪ ದಿನದ ನಂತರ ಗಂಡ ಕಿರಣ ಕುಮಾರ್ ಅನುಷಾರವರ ಬಳಿ ಇರುವ 30 ಪವನ್ ಚಿನ್ನಾಭರಣಗಳನ್ನು ಗಿರಿವಿ ಇಡಲು ನೀಡುವಂತೆ ಒತ್ತಾಯಿಸಿ ಪಡೆದುಕೊಂಡು ಗಿರಿವಿ ಇಟ್ಟಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನಂತರ 2018 ನೇ ಅಗಸ್ಟ್ ತಿಂಗಳಲ್ಲಿ ಆರೋಪಿಗಳಾಧ ರವಿ ಮತ್ತು ಕುಮುದಾಕ್ಷಿ ಯವರು ಕಲ್ಯಾಣಪುರದ ಸಂತೆಕಟ್ಟೆ ಎಂಬಲ್ಲಿ ಅಂಗಡಿಯನ್ನು ತೆರೆದು ಅದರಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಅನುಷಾರವರು ಅದರಲ್ಲಿ ವ್ಯವಹಾರ ಮಾಡುವಂತೆ ಮಾಡಿ ಹಿಂಸೆ ನೀಡಿರುತ್ತಾರೆ ಎಂದು ದೂರಿದ್ದಾರೆ.
ದಿನಾಂಕ:07/06/2020 ರಂದು ರವಿ ಮತ್ತು ಕುಮುದಾಕ್ಷಿ ಯವರು ಅನುಷಾ ರನ್ನು ಹಾಗೂ ಕಿರಣ್ ಕುಮಾರ್ ನನ್ನು ಮನೆಯಿಂದ ಹೊರಹಾಕಿದ್ದು ನಂತರ ಕೋಟೇಶ್ವರ ಅಂಶು ಕಟ್ಟಡದಲ್ಲಿ ಬಾಡಿಗೆಗೆ ವಾಸ್ತವ್ಯ ಮಾಡಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆ ಸಮಯದಲ್ಲಿ ಗಂಡ ಕಿರಣ್ ಕುಮಾರ್ ನು ಜೂಜಾಟದ ವೆಬ್ ಸೈಟ್ ಗಳಲ್ಲಿ ಜೂಜಾಟವಾಡಿ ಲಕ್ಷಾಂತರ ಹಣವನ್ನು ಪೋಲು ಮಾಡಿ ಅನುಷಾರನ್ನು ಹಾಗೂ ಅವರ ಮಗಳನ್ನು ನಿರ್ಲಕ್ಷಿಸಿದ್ದು, ಕಿರಣ್ ಕುಮಾರ್ ನು ಸದಾಕಾಲ ಮದ್ಯಪಾನ ಮಾಡಿ ಅನುಷಾರನ್ನು ಹಾಗೂ ಅವರ ತವರು ಮನೆಯವರನ್ನು ಬೈದು ಮಾನಸಿಕ ಹಿಂಸೆ ನೀಡುತ್ತಿದ್ದನು ಎಂದು ದೂರಿದ್ದಾರೆ. ಅಲ್ಲದೇ ಹಲವಾರು ರೀತಿಯ ಜೂಜಾಟದಲ್ಲಿ ತೊಡಗಿ ಅನುಷಾರಲ್ಲಿ ಹಾಗೂ ಅವರ ತವರು ಮನೆಯವರಲ್ಲಿ ಹಲವಾರು ಕಡೆಗಳಲ್ಲಿ ಸಾಲವನ್ನು ಮಾಡಿಸಿ ಹಣವನ್ನು ನೀಡುವಂತೆ ಒತ್ತಾಯಿಸಿ ಹಣವನ್ನು ಪಡೆದುಕೊಂಡಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಿರಣ್ ಕುಮಾರ್ ನ ಕುಡಿತ, ಜೂಜಾಟಕ್ಕೆ ಅನುಷಾರವರು ಆಕ್ಷೇಪಿಸಿದಾಗ ಹಲವಾರು ಬಾರಿ ಹೊಡೆದಿರುತ್ತಾನೆ ಎಂದು ದೂರಿದ್ದಾರೆ. ಕಿರಣ್ ಕುಮಾರ್,ರವಿ,ಕುಮುದಾಕ್ಷಿ ಈ ಮೂವರು ಆರೋಪಿಗಳು ಅನುಷಾರವರಿಗೆ ವೈವಾಹಿಕ ಹಿಂಸೆ, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ ಎಂದು ಅನುಷಾರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 85, 115(2), 352 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.