ಉಡುಪಿ: ದಿನಾಂಕ:25-11-2024(ಹಾಯ್ ಉಡುಪಿ ನ್ಯೂಸ್) ಬಾಡಿಗೆ ಮನೆ ಒದಗಿಸಿ ಕೊಡುವುದಾಗಿ ನಂಬಿಸಿ ಉಚ್ಚಿಲ ನಿವಾಸಿ ಯೋರ್ವರಿಗೆ ವ್ಯಕ್ತಿ ಯೋರ್ವ 3 ಲಕ್ಷ ರೂಪಾಯಿ ವಂಚನೆ ನಡೆಸಿರುವ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಪು ಉಚ್ಚಿಲ ನಿವಾಸಿ ಶೇಖ್ ಜಮೀಲ್ ಅಹಮ್ಮದ್ ಎಂಬವರು ಉಡುಪಿಯಲ್ಲಿ ಬಾಡಿಗೆ ಮನೆಯನ್ನು ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಬೆಳಪು ಗ್ರಾಮದ ನಿವಾಸಿ ಸದಕಾತುಲ್ಲಾ ಅಬ್ಬಾಸ್ ಬ್ಯಾರಿ ಎಂಬುವವರ ಪರಿಚಿತವಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಸದಕಾತುಲ್ಲಾ ಅಬ್ಬಾಸ್ ಬ್ಯಾರಿಯು ಉಡುಪಿ ತಾಲ್ಲೂಕು 76 ಬಡಗುಬೆಟ್ಟು ಗ್ರಾಮದಲ್ಲಿ ಕೋರ್ಟ್ ಕಾಂಪ್ಲೆಕ್ಸ್ ಎದುರು ಇರುವ ಮಾಂಡವಿ ಕೋರ್ಟ್ ಅಪಾರ್ಟಮೆಂಟಿನ ಫ್ಲಾಟ್ ನಂಬ್ರ 306 ನ್ನು ತೋರಿಸಿ ಸದ್ರಿ ಫ್ಲಾಟ್ ನನ್ನ ಹೆಸರಿಗಿರುವುದಾಗಿ ನಂಬಿಸಿ, ದಿನಾಂಕ:16-02-2019 ರಂದು ಫ್ಲಾಟನ್ನು ಫಿರ್ಯಾದುದಾರರಿಗೆ ಐದು ವರ್ಷಗಳ ಅವಧಿಗೆ ಲೀಸಿಗೆ 3,00,000/-(ಮೂರು ಲಕ್ಷ) ಹಣ ವನ್ನು ಚೆಕ್ ಮುಖಾಂತರ ಪಡೆದುಕೊಂಡಿರುತ್ತಾನೆ.ಫಿರ್ಯಾದುದಾರರು ಭೋಗ್ಯಕ್ಕೆ ಪಡೆದ ಫ್ಲಾಟಿಗೆ ಸಾಮಾಗ್ರಿಗಳನ್ನು ಸಾಗಾಟ ಮಾಡುವ ದಿವಸ ಸದಕಾತುಲ್ಲಾ ಅಬ್ಬಾಸ್ ಬ್ಯಾರಿಯು ಫ್ಲಾಟ್ ನಂಬ್ರ 306 ರ ಸ್ವಲ್ಪ ದಿನಗಳ ಮಟ್ಟಿಗೆ ಅಗತ್ಯವಿದೆ ಎಂದು ಹೇಳಿ ನೀವು ಸ್ವಲ್ಪ ದಿನಗಳ ಮಟ್ಟಿಗೆ ಇದೇ ಅಪಾರ್ಟಮೆಂಟಿನಲ್ಲಿರುವ ನನ್ನ ಇನ್ನೊಂದು ಫ್ಲಾಟ್ ನಂಬ್ರ 302 ರಲ್ಲಿ ಇರುವಂತೆ ಹೇಳಿ ಕೀ ಯನ್ನು ನೀಡಿದ್ದು,ಸದ್ರಿ ಫ್ಲಾಟ್ ನಂಬ್ರ 302 ರಲ್ಲಿ ಫಿರ್ಯಾದುದಾರರು ವಾಸಮಾಡಿಕೊಂಡಿದ್ದ ಸಮಯ ಫ್ಲಾಟ್ ನಂಬ್ರ 302 ರ ನೈಜ ಮಾಲಿಕರಾಗಿರುವ ಮಧುಸೂದನ್ ಎಸ್ ರವರು ಬಂದು ಸದ್ರಿ ಫ್ಲಾಟ್ ನನಗೆ ಸಂಬಂದಿಸಿದ್ದು, ನಾನು ಈ ಫ್ಲಾಟಿನ ಮಾಲೀಕನಾಗಿರುತ್ತೇನೆ.ನೀವು ಈ ಕೂಡಲೇ ಫ್ಲಾಟನ್ನು ಖಾಲಿ ಮಾಡುವಂತೆ ತಿಳಿಸಿದ್ದು,ಫಿರ್ಯಾದುದಾರರು ಫ್ಲಾಟ್ ನಂಬ್ರ 302 ನ್ನು ಮಧುಸೂದನ್ ಎಸ್ ರವರಿಗೆ ಬಿಟ್ಟುಕೊಟ್ಟು ಪ್ರಸ್ತುತ ಬೇರೆ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿರುತ್ತಾರೆ. ದಿನಾಂಕ:29-10-2024 ರಂದು ಫಿರ್ಯಾದುದಾರರು ಉಡುಪಿ ನ್ಯಾಯಾಲಯಕ್ಕೆ ಹೋಗಿದ್ದ ಸಮಯ ಆರೋಪಿ ಸದಕಾತುಲ್ಲಾ ಅಬ್ಬಾಸ್ ಬ್ಯಾರಿಯನ್ನು ಕುರಿತು ಮಾತಾನಾಡಿಸಿ ಹಣವನ್ನು ವಾಪಸ್ಸು ನೀಡುವಂತೆ ಕೇಳಿಕೊಂಡಿದ್ದು ಅದಕ್ಕೆ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ನೀನು ನನ್ನ ತಂಟೆ-ತಕರಾರಿಗೆ ಬಂದರೆ ನಿನ್ನ ಕೈಕಾಲು ಮುರಿದು ಹಾಕಿ ಸಾಯಿಸುತ್ತೇನೆ ಎಂದು ಜೀವ ಬೆದರಿಕೆಯನ್ನು ಹಾಕಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣೆ ಅಪರಾಧ ಕ್ರಮಾಂಕ: 201/2024 ಕಲಂ:111(1)(Ⅲ) 111(6) 112 316(2) 318(2) 318(3) 319 335(A) 336(3) 351(2)(3) 352 BNS ರಂತೆ ಪ್ರಕರಣ ದಾಖಲಿಸಲಾಗಿದೆ.
ಸದಕಾತುಲ್ಲಾ ಅಬ್ಬಾಸ್ ಬ್ಯಾರಿಯು ಉಡುಪಿ ತಾಲ್ಲೂಕು 76 ಬಡಗುಬೆಟ್ಟು ಗ್ರಾಮದಲ್ಲಿ ಕೋರ್ಟ್ ಕಾಂಪ್ಲೆಕ್ಸ್ ಎದುರು ಇರುವ ಮಾಂಡವಿ ಕೋರ್ಟ್ ಅಪಾರ್ಟಮೆಂಟಿನ ಫ್ಲಾಟ್ ನಂಬ್ರ 306 ನ್ನು ತೋರಿಸಿ ಆ ಫ್ಲಾಟ್ ತನ್ನ ಹೆಸರಿಗಿರುವುದಾಗಿ ನಂಬಿಸಿ, ದಿನಾಂಕ:16-02-2019 ರಂದು ಫ್ಲಾಟನ್ನು ಶೇಖ್ ಜಮೀಲ್ ಅಹಮ್ಮದ್ ರಿಗೆ ಐದು ವರ್ಷಗಳ ಅವಧಿಗೆ ಲೀಸಿಗೆ 3,00,000/-(ಮೂರು ಲಕ್ಷ) ಹಣ ವನ್ನು ಚೆಕ್ ಮುಖಾಂತರ ಪಡೆದುಕೊಂಡಿರುತ್ತಾನೆ ಎಂದು ದೂರಿದ್ದಾರೆ.
ಶೇಖ್ ಜಮೀಲ್ ಅಹಮ್ಮದ್ ರವರು ಬಾಡಿಗೆಗೆ ಪಡೆದ ಫ್ಲಾಟಿಗೆ ಸಾಮಾಗ್ರಿಗಳನ್ನು ಸಾಗಾಟ ಮಾಡುವ ದಿವಸ ಸದಕಾತುಲ್ಲಾ ಅಬ್ಬಾಸ್ ಬ್ಯಾರಿಯು ಫ್ಲಾಟ್ ನಂಬ್ರ 306 ತನಗೆ ಸ್ವಲ್ಪ ದಿನಗಳ ಮಟ್ಟಿಗೆ ಅಗತ್ಯವಿದೆ ಎಂದು ಹೇಳಿ ನೀವು ಸ್ವಲ್ಪ ದಿನಗಳ ಮಟ್ಟಿಗೆ ಇದೇ ಅಪಾರ್ಟಮೆಂಟಿನಲ್ಲಿರುವ ನನ್ನ ಇನ್ನೊಂದು ಫ್ಲಾಟ್ ನಂಬ್ರ 302 ರಲ್ಲಿ ಇರುವಂತೆ ಹೇಳಿ ಕೀ ಯನ್ನು ನೀಡಿದ್ದು ,ಆ ಫ್ಲಾಟ್ ನಂಬ್ರ 302 ರಲ್ಲಿ ಶೇಖ್ ಜಮೀಲ್ ಅಹಮ್ಮದ್ ವಾಸಮಾಡಿಕೊಂಡಿದ್ದ ಸಮಯ ಫ್ಲಾಟ್ ನಂಬ್ರ 302 ರ ನೈಜ ಮಾಲಿಕರಾಗಿರುವ ಮಧುಸೂದನ್ ಎಸ್ ಎಂಬವರು ಬಂದು ಈ ಫ್ಲಾಟ್ ನನಗೆ ಸಂಬಂದಿಸಿದ್ದು, ನಾನು ಈ ಫ್ಲಾಟಿನ ಮಾಲೀಕನಾಗಿರುತ್ತೇನೆ.ನೀವು ಈ ಕೂಡಲೇ ಫ್ಲಾಟನ್ನು ಖಾಲಿ ಮಾಡುವಂತೆ ತಿಳಿಸಿದ್ದಾರೆ ಎಂದು ದೂರಿದ್ದಾರೆ .
ಶೇಖ್ ಜಮೀಲ್ ಅಹಮ್ಮದ್ ಅವರು ಫ್ಲಾಟ್ ನಂಬ್ರ 302 ನ್ನು ಮಧುಸೂದನ್ ಎಸ್ ರವರಿಗೆ ಬಿಟ್ಟುಕೊಟ್ಟು ಪ್ರಸ್ತುತ ಬೇರೆ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ:29-10-2024 ರಂದು ಶೇಖ್ ಜಮೀಲ್ ಅಹಮ್ಮದ್ ಅವರು ಉಡುಪಿ ನ್ಯಾಯಾಲಯಕ್ಕೆ ಹೋಗಿದ್ದ ಸಮಯ ಆರೋಪಿ ಸದಕಾತುಲ್ಲಾ ಅಬ್ಬಾಸ್ ಬ್ಯಾರಿಯನ್ನು ಕುರಿತು ಮಾತನಾಡಿಸಿ ಹಣವನ್ನು ವಾಪಸ್ಸು ನೀಡುವಂತೆ ಕೇಳಿಕೊಂಡಿದ್ದು ಅದಕ್ಕೆ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ನೀನು ನನ್ನ ತಂಟೆ-ತಕರಾರಿಗೆ ಬಂದರೆ ನಿನ್ನ ಕೈಕಾಲು ಮುರಿದು ಹಾಕಿ ಸಾಯಿಸುತ್ತೇನೆ ಎಂದು ಜೀವ ಬೆದರಿಕೆಯನ್ನು ಹಾಕಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಕಲಂ:111(1)(Ⅲ) 111(6) 112 316(2) 318(2) 318(3) 319 335(A) 336(3) 351(2)(3) 352 BNS ರಂತೆ ಪ್ರಕರಣ ದಾಖಲಾಗಿದೆ.