ಕುಂದಾಪುರ: ದಿನಾಂಕ 21/11/2024(ಹಾಯ್ ಉಡುಪಿ ನ್ಯೂಸ್) ಕಾಳಾವರ ಕಡೆಗೆ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್ ಲಾರಿ ಯನ್ನು ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಭೀಮಾಶಂಕರ ಸಿನ್ನೂರ ಸಂಗಣ್ಣ ಅವರು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಭೀಮಾ ಶಂಕರ ಸಿನ್ನೂರ ಸಂಗಣ್ಣ ಅವರಿಗೆ ದಿನಾಂಕ :20-11-2024 ರಂದು ಎನ್.ಹೆಚ್ ನಿಂದ ಸಳ್ವಾಡಿ ಮಾರ್ಗವಾಗಿ ಕಾಳಾವರ ಕಡೆಗೆ KA-21-C-4331 ನೊಂದಣಿ ನಂಬ್ರದ ಟಿಪ್ಪರ್ ವಾಹನದಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ವಾಹನ ತಪಾಸಣೆ ನಡೆಸುತ್ತಿರುವಾಗ ಆರೋಪಿಯೋರ್ವನು ಟಿಪ್ಪರ್ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದು 100 ಮೀಟರ್ ಹಿಂದೆ ಟಿಪ್ಪರ್ ನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಚಾಲಕನು ವಾಹನದಿಂದ ಕೆಳಕ್ಕೆ ಇಳಿದು ಹಾಡಿಯಲ್ಲಿ ಓಡಿ ತಪ್ಪಿಸಿಕೊಂಡಿದ್ದು, ನಂತರ ಟಿಪ್ಪರ್ ವಾಹನವನ್ನು ತಪಾಸಣೆ ನಡೆಸಿದಾಗ ಟಿಪ್ಪರ್ ವಾಹನದ ಹಿಂಬದಿಯ ಬಾಡಿಯಲ್ಲಿ 2½ ಯೂನಿಟ್ ಮರಳು ಇದ್ದು ಮರಳು ಸಹಿತ ಟಿಪ್ಪರ್ ವಾಹನವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ .
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 303(2) BNS & 4, 4(1)(a),21 MMDR Act ಮತ್ತು 3(1), 42(1), 43(2), 44 Karnataka Minor Mineral Consistent Rule 1994 ರಂತೆ ಪ್ರಕರಣ ದಾಖಲಾಗಿದೆ.