Spread the love

ಮಣಿಪಾಲ: ದಿನಾಂಕ:19-11-2024( ಹಾಯ್ ಉಡುಪಿ ನ್ಯೂಸ್) ಮುಂಬೈಯಿಂದ ಉಡುಪಿ ಗೆ ಟ್ರೈನ್ ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರೋರ್ವರ 63 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ಕಳ್ಳರು ಕಳ್ಳತನ ನಡೆಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮುಂಬೈ ನಿವಾಸಿ ಅವಿನಾಶ್ ಎಂಬವರು ಕುಟುಂಬದವರೊಂದಿಗೆ ದಿನಾಂಕ 15/11/2024 ರಂದು CST Mangalore Express Train No-12133 Coach NO:S3 ರಲ್ಲಿ ಮುಂಬೈಯಿಂದ ಉಡುಪಿ ಗೆ ಹೊರಟು ಪ್ರಯಾಣಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅವಿನಾಶ್ ಅವರು ಒಡವೆ ಹಾಗೂ ಬಟ್ಟೆಗಳಿದ್ದ 4 ಸೂಟ್‌ಕೇಸ್‌ಗಳನ್ನು ಬೀಗ ಹಾಕದೇ ಜಿಪ್‌ ಲಾಕ್‌ ಮಾಡಿ ಸೀಟಿನ ಕೆಳಗೆ ಇಟ್ಟಿದ್ದು ದಿನಾಂಕ 16/11/2024 ರಂದು ಅವಿನಾಶ್ ಅವರು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಇಳಿದು ಮನೆಗೆ ಹೋಗಿ ಸಂಜೆ ಬ್ಯಾಗನ್ನು ತೆರೆದು ನೋಡಿದಾಗ 2 ಬ್ಯಾಗಿನಲ್ಲಿ ಇಟ್ಟಿದ್ದ 63 ಲಕ್ಷ ಬೆಲೆಬಾಳುವ 900 ಗ್ರಾಂ ಚಿನ್ನದ ಒಡವೆಗಳು ಕಾಣೆಯಾಗಿರುವುದು ಕಂಡು ಬರುತ್ತದೆ ಎಂದು ದೂರಿದ್ದಾರೆ.

ಒಡವೆಗಳನ್ನು ಪನ್‌ವೆಲ್‌ನಿಂದ ಕಂಕಾವಲಿ ರೈಲ್ವೆ ನಿಲ್ದಾಣದ ಮಧ್ಯೆ ಯಾರೋ ಕಳ್ಳರು ಕಳವು ಮಾಡಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕಲಂ: 303(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!